ಅಪ್ಪಟ ರಾಷ್ಟ್ರಭಕ್ತನಿಗೆ ಮಾತ್ರ ಆರ್ ಎಸ್ ಎಸ್ ಮೂಲ ಗೊತ್ತಾಗೋದು : ಸಿ.ಟಿ.ರವಿ
ಚಿಕ್ಕಮಗಳೂರು : ಅಪ್ಪಟ ರಾಷ್ಟ್ರಭಕ್ತನಿಗೆ ಆರ್ ಎಸ್ ಎಸ್ ಮೂಲ ಗೊತ್ತಾಗೋದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನಗೆ ಆರ್ ಎಸ್ ಎಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಏಪ್ರಿಲ್ ಬಳಿಕ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಮಾಜಿ ಸಿಎಂ ಸಿದ್ದರಾಮಯ್ಯ ಯಾವಾಗ ಆರ್ ಎಸ್ ಎಸ್ ಗೆ ಬಂದ್ರೋ ಗೊತ್ತಿಲ್ಲ.
ಆರ್ ಆರ್ ಮೂಲ ತಿಳಿಯಬೇಕಾದರೆ ಸಿದ್ದರಾಮಯ್ಯ ಇಲ್ಲಿಗೆ ಬರಬೇಕು. ಮೊದಲು ಸಿದ್ದರಾಮಯ್ಯ ಆರ್ ಎಸ್ ಎಸ್ ಗೆ ಬರಲಿ ಆಮೇಲೆ ಮೂಲ ತಿಳಿಯಲಿ.
ಕೆಲ ವೇಳೆ ಸಿದ್ದರಾಮಯ್ಯಗೆ ಅವರ ಮೂಲದ ಬಗ್ಗೆ ಡೌಟ್ ಬರುತ್ತೆ. ಅಪ್ಪಟ ರಾಷ್ಟ್ರಭಕ್ತನಿಗೆ ಆರ್ ಎಸ್ ಎಸ್ ಮೂಲ ಗೊತ್ತಾಗೋದು.
ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್ ಎಸ್ ಎಸ್ ಮೂಲ ಗೊತ್ತಾಗಲ್ಲ. ಅವರಿಗೆ ದಿನ ಕನಸು ಬೀಳುತ್ತೆ, ಅದನ್ ಬೆಳಗ್ಗೆ ಬಂದು ಹೇಳ್ತಾರೆ ಎಂದು ಕಾಲೆಳೆದರು.
ಇದೇ ವೇಳೆ ಮಹಾ ಸಿಎಂ ಉದ್ಧವ್ ಠಾಕ್ರೆ ಗಡಿ ಕ್ಯಾತೆ ಬಗ್ಗೆ ಮಾತನಾಡಿ, ಗಡಿ ವಿಚಾರವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಹಳ ಹಿಂದಿನಿಂದ ಬಂದಿದೆ.
ಭಾಷಾವರು ಪ್ರಾಂತ್ಯ ರಚನೆಯಾಗಬೇಕಾದ್ರೆ ಬಿಜೆಪಿ ಅಸ್ಥಿತ್ವದಲ್ಲಿರಲಿಲ್ಲ. ಅಂದು ಕಾಂಗ್ರೆಸ್ ಅಧಿಕಾರದಲ್ಲಿತ್ತು.
ಉದ್ಧವ್ ಠಾಕ್ರೆ ಪ್ರಶ್ನೆ ಮಾಡಬೇಕಾದ್ರೆ ಅವ್ರ ಬೆಂಬಲಿತ ಪಕ್ಷದ ವಿರುದ್ಧ ಪ್ರಶ್ನೆ ಮಾಡಲಿ ಎಂದು ಮೂಲ ಸಮಸ್ಯೆ ಬಗ್ಗೆ ಮಾತನಾಡದೇ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮಾತನಾಡಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









