ಬೆಂಗಳೂರು: ಹೌದು, ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆಯಂತಿದೆ. ಕೇಂದ್ರ ಸರ್ಕಾರದ ಕಷ್ಟಮ್ಸ್ ಅಧಿಕಾರಿಯೇ ಅಕ್ರಮವಾಗಿ 74 ಲಕ್ಷ ರೂ.ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಚೆನ್ನೈನಲ್ಲಿ ಕಷ್ಟಮ್ಸ್ ಅಧಿಕಾರಿಯಾಗಿರುವ ಇರ್ಫಾನ್ ಅಹಮದ್ ಎಂಬಾತ ಲಕ್ನೋಗೆ ತೆರಳಲು ಪತ್ನಿ ಜತೆ ದೇವನಹಳ್ಳಿಯ ಕೆಂಪೇಗೌಡ ಏರ್‍ಪೋರ್ಟ್‍ಗೆ ಬಂದಿದ್ದ. ಏರ್‍ಪೋರ್ಟ್‍ನಲ್ಲಿ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಸಿಬ್ಬಂದಿ ಕಷ್ಟಮ್ಸ್ ಅಧಿಕಾರಿ ಹಾಗೂ ಅತನ ಪತ್ನಿಯ ತಪಾಸಣೆ ನಡೆಸಿದ್ದಾರೆ. ಸಿಐಎಸ್‍ಎಫ್ ಸಿಬ್ಬಂದಿಯ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಇರ್ಫಾನ್ ಪತ್ನಿ 10 ಲಕ್ಷ ರೂ. ನಗದು ಬಾತ್ ರೂ.ನಲ್ಲಿ ಎಸೆದು ಬಂದಿದ್ದಳು.

ಆದರೆ, ಕಸ್ಟಮ್ಸ್ ಅಧಿಕಾರಿ ತಪಾಸಣೆ ವೇಳೆ ಶೂಟ್‍ಕೇಸ್‍ನಲ್ಲಿ 60 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆ. ಇಷ್ಟೊಂದು ನಗದು ಪತ್ತೆಯಾದ ಹಿನ್ನೆಲೆಯಲ್ಲಿ ದಂಪತಿ ತಂಗಿದ್ದ ಏರ್‍ಪೋರ್ಟ್‍ನ ಕೊಠಡಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕೊಠಡಿಯ ಬಾತ್ ರೂಂ.ನಲ್ಲಿ 10 ಲಕ್ಷ ನಗದು ಸಿಕ್ಕಿದೆ. ಇದರೊಂದಿಗೆ ದಂಪತಿ ಬಳಿ ಒಟ್ಟು 74 ಲಕ್ಷ ರೂ. ನಗದು ಜಪ್ತಿಯಾದಂತಾಗಿದೆ.
ಐಟಿಗೆ ಪ್ರಕರಣ ವರ್ಗಾವಣೆ..!
ಕಷ್ಟಮ್ಸ್ ಅಧಿಕಾರಿ ಅಕ್ರಮವಾಗಿ 74 ಲಕ್ಷ ರೂ. ನಗದು ವರ್ಗಾವಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಏರ್‍ಪೋರ್ಟ್ ಅಧಿಕಾರಿಗಳು ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ (ಐಟಿ)ಗೆ ವರ್ಗಾವಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದುಕೊಂಡು ಲಕ್ಷ ಲಕ್ಷ ಹಣವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. 74 ಲಕ್ಷ ರೂ. ನಗದು ಅಷ್ಟೇ ಅಲ್ಲದೆ ದುಬಾರಿ ಬೆಲೆ ಬೆಲೆಯ ಎರಡು ಮೊಬೈಲ್, ಆಫಲ್ ವಾಚ್, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








