ಸಂಸತ್ತು ಕ್ಯಾಂಟೀನ್‌ನಲ್ಲಿ ಇನ್ನು ಮುಂದೆ ಆಹಾರ ಸಬ್ಸಿಡಿಯಿಲ್ಲ – ಲೋಕಸಭಾ ಸ್ಪೀಕರ್ ಓಂ ಬಿರ್ಲಾ
ಹೊಸದಿಲ್ಲಿ, ಜನವರಿ20: ಸಂಸತ್ತು ಕ್ಯಾಂಟೀನ್‌ನಲ್ಲಿ ಆಹಾರ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಹೊಸ ಕ್ರಮದಲ್ಲಿ, ಸಂಸತ್ತು ಕ್ಯಾಂಟೀನ್‌ನಲ್ಲಿ ಆಹಾರ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಪ್ರಕಟಿಸಿದರು.
ಸಂಸದರಿಗೆ ಮತ್ತು ಇತರರಿಗೆ ಸಂಸತ್ತು ಕ್ಯಾಂಟೀನ್‌ಗಳಲ್ಲಿ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸಿರುವ ಹಿನ್ನೆಲೆಯಲ್ಲಿ ಆಹಾರ ದುಬಾರಿಯಾಗಲಿದೆ ಎಂದು ಅವರು ಹೇಳಿದರು.
ಬಿರ್ಲಾ ಈ ಕ್ರಮದ ಆರ್ಥಿಕ ಪರಿಣಾಮಗಳನ್ನು ನಿರ್ದಿಷ್ಟಪಡಿಸದಿದ್ದರೂ, ಲೋಕಸಭಾ ಸಚಿವಾಲಯವು ಸಬ್ಸಿಡಿ ಕೊನೆಗೊಂಡಿರುವುದರಿಂದ ವಾರ್ಷಿಕವಾಗಿ 8 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಉಳಿಸಬಹುದು ಎಂದು ಹೇಳಿದರು.
ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಈ ಮಾಹಿತಿ ನೀಡಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಸಮಯದ ವೇಳಾಪಟ್ಟಿಯ ಬಗ್ಗೆ ಓಂ ಬಿರ್ಲಾ ಮಾಹಿತಿ ನೀಡಿದರು.
ಭಾರತೀಯ ರೈಲ್ವೆ ಹಣಕಾಸು ನಿಗಮ (IRFC)ದ ಐಪಿಒಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಜನವರಿ 29 ರಿಂದ ಪ್ರಾರಂಭವಾಗಲಿರುವ ಮುಂದಿನ ಸಂಸತ್ತಿನ ಅಧಿವೇಶನದ ಸಿದ್ಧತೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿರ್ಲಾ, ಉತ್ತರ ರೈಲ್ವೆಯ ಬದಲಿಗೆ ಸಂಸತ್ತು ಕ್ಯಾಂಟೀನ್‌ಗಳನ್ನು ಈಗ ಐಟಿಡಿಸಿ ನಡೆಸಲಿದೆ ಎಂದು ಹೇಳಿದರು.
ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಎಲ್ಲಾ ಸಂಸತ್ ಸದಸ್ಯರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸುವಂತೆ ಕೋರಲಾಗುವುದು ಎಂದು ಬಿರ್ಲಾ ಹೇಳಿದರು.
ರಾಜ್ಯಸಭೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ, ಲೋಕಸಭೆಯು ದ್ವಿತೀಯಾರ್ಧದಲ್ಲಿ ಸಂಜೆ 4 ರಿಂದ ರಾತ್ರಿ 8 ರ ವರೆಗೆ ಕಾರ್ಯನಿರ್ವಹಿಸಲಿದೆ. ಅಧಿವೇಶನದಲ್ಲಿ ಈಗಾಗಲೇ ನಿಗದಿತ ಸಮಯಕ್ಕೆ ಒಂದು ಗಂಟೆ ಪ್ರಶ್ನೆ ಅವಧಿಯನ್ನು ಅನುಮತಿಸಲಾಗುತ್ತದೆ.
ಸಂಸದರ ಆರ್‌ಟಿಪಿಸಿಆರ್ ಕೋವಿಡ್ -19 ಪರೀಕ್ಷೆಗಳಿಗೆ ಅವರ ನಿವಾಸದ ಬಳಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಬಿರ್ಲಾ ಹೇಳಿದರು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಸಂಸತ್ತಿನ ಆವರಣದಲ್ಲಿ, ಜನವರಿ 27 ಮತ್ತು 28ರಂದು ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು. ಸಂಸದರ ಕುಟುಂಬಕ್ಕೆ ಮತ್ತು ಸಂಸದರ ಸಿಬ್ಬಂದಿ ಸದಸ್ಯರಿಗೆ ಸಹ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯಗಳು ಅಂತಿಮಗೊಳಿಸಿದ ವ್ಯಾಕ್ಸಿನೇಷನ್ ಡ್ರೈವ್ ನೀತಿ ಸಂಸದರಿಗೂ ಅನ್ವಯಿಸುತ್ತದೆ ಎಂದು ಬಿರ್ಲಾ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಚಹಾದೊಂದಿಗೆ ಈ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ https://t.co/4Zj2CInM6s
— Saaksha TV (@SaakshaTv) January 17, 2021
ಸ್ಮಾರ್ಟ್ಫೋನ್ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಕೆಲವು ದಿನ ಕಾಯಿರಿhttps://t.co/w7BPVNZ9sj
— Saaksha TV (@SaakshaTv) January 18, 2021








