ಚೀನಾದ ವಿರುದ್ಧ ಭಾರತ ಬಹಳ ದುರ್ಬಲವಾಗುತ್ತಿದೆ: ರಾಹುಲ್ ಗಾಂಧಿ..!
ದೆಹಲಿ: ಚೀನಾ ವಿರುದ್ಧ ಭಾರತ ದಿನೇದಿನೇ ದುರ್ಬಲವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಿಡಿಕಾರಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಭಾರತದ ರಕ್ಷಣೆಯ ತನ್ನ ಮೂಲ ಜವಾಬ್ದಾರಿಯನ್ನು ಮರೆತಿದೆ. ಹೀಗಾಗಿ, ಚೀನಾ ವಿರುದ್ಧ ಭಾರತ ದುರ್ಬಲವಾಗ್ತಿದೆ ಎಂದು ಆರೋಪಿಸಿದ್ದಾರೆ. ಅದಾಗ್ಯೂ ಭಾರತ ಜಾಗತಿಕವಾಗಿ ಸಮರ್ಪಕ ರಾಜಕೀಯ ಮತ್ತು ಮಿಲಿಟರಿ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
ಕೊರೊನಾ ಮಹಾಮಾರಿಗೆ ಬಲಿಯಾದವರಿಗೆ ಜೋ ಬೈಡನ್ ನಮನ..!
ಜತೆಗೆ, ಅರ್ನಬ್ ಗೋಸ್ವಾಮಿ ಮತ್ತು ಮಾಜಿ ಬಾರ್ಕ್ ಮುಖ್ಯಸ್ಥ ಪಾರ್ಥೋ ದಾಸ್ಗುಪ್ತಾ ನಡುವಿನ ವಾಟ್ಸ್ ಆಪ್ ಚಾಟ್ ಎಂದೇ ಹೇಳಲಾಗ್ತಿರುವ ವೈರಲ್ ದಾಖಲೆಗಳಲ್ಲಿ ಪಾಕ್ ನ ಬಾಲಾಕೋಟ್ ದಾಳಿ ಕುರಿತು ಉಲ್ಲೇಖವಿರುವ ವಿಚಾರವಾಗಿ ಮಾತನಾಡಿರುವ ರಾಹುಲ್ ಗಾಂಧಿ ಬಾಲಾಕೋಟ್ ದಾಳಿಯಂತಹ ಸೂಕ್ಷ್ಮ ನಿರ್ಧಾರಗಳು ದೇಶದ ಪ್ರಧಾನಿ, ಕೇಂದ್ರ ಗೃಹ ಸಚಿವರು, ರಕ್ಷಣಾ ಇಲಾಖೆ ಸಚಿವರು ಮತ್ತು ವಾಯು ಸೇನೆ ಮುಖ್ಯಸ್ಥರಿಗೆ ಮಾತ್ರ ತಿಳಿದಿರುತ್ತದೆ. ಆದರೆ ದಾಳಿಯ ಮುನ್ನವೇ ಈ ಕುರಿತು ರಿಪಬ್ಲಿಕ್ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮಾಹಿತಿ ಹೊಂದಿದ್ದರೆ ಅದು ಗಂಭೀರ ಅಪರಾಧವಾಗಿದೆ. ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯ ಮಾಹಿತಿ ಸೋರಿಕೆ ಮಾಡಿದವರ ವಿರುದ್ಧ ತನಿಖೆ ನಡೆಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
ತನ್ನ ಗಂಡ ‘ಅವನಲ್ಲ ಅವಳು’ ಎಂದು ಗೊತ್ತಾಯ್ತು…. ಮುಂದೇನಾಯ್ತು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








