ಮೈಸೂರು: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್. ಟಿ)ಕ್ಕೆ ಸೇರಿಸುವಂತೆ ಒತ್ತಾಯಿಸಿ ಕಾಗಿನೆಲೆ ಮಠದ ಸ್ವಾಮೀಜಿ ಆರಂಭಿಸಿರುವ ಪಾದಯಾತ್ರೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕುರುಬ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಅದರಲ್ಲೂ, ಕುರುಬ ಸಮುದಾಯದವರೇ ಆದ ಕಡು ರಾಜಕೀಯ ವಿರೋಧಿಗಳಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಸಚಿವ ಹೆಚ್.ವಿಶ್ವನಾಥ್ ಆಗಾಗ ಕೆಂಡ ಕಾರುತ್ತಲೇ ಇದ್ದಾರೆ.

ಈ ಹಿಂದೆ ಕುರುಬ ಸಮುದಾಯದ ಒಗ್ಗಟ್ಟು ಒಡೆಯಲು ಆರ್ಎಸ್ಎಸ್ ಸಂಚು ನಡೆಸಿದೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಇದೀಗ ಕಾಗಿನೆಲೆ ಸ್ವಾಮೀಜಿ ಪಾದಯಾತ್ರೆಗೆ ಆರ್ಎಸ್ಎಸ್ ಫಂಡ್ ನೀಡಿದ್ದಾರೆಂದು ಗಂಭೀರ ಟೀಕೆ ಮಾಡಿದ್ದಾರೆ.
ಸಿದ್ದರಾಮಯ್ಯರ ಆರೋಪಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್, ಕಾಗಿನೆಲೆ ಸ್ವಾಮೀಜಿ ವಿರುದ್ದ ಹೇಳಿಕೆ ನೀಡಿರುವ ಕಾರಣ ಕುರುಬ ಸಮಾಜದಿಂದ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.

ಸಿದ್ದರಾಮಯ್ಯನವರೇ ನಿಮಗೆ ಮಠನೂ ಗೊತ್ತಿಲ್ಲ, ಸ್ವಾಮೀಜಿನೂ ಗೊತ್ತಿಲ್ಲ, ಅಷ್ಟೇ ಯಾಕೆ? ಮಠದ ಬಗ್ಗೆ ನಿಮಗೆ ಗೌರವ ಇಲ್ಲ. ಮಠ ಕಟ್ಟೋಕೆ ನಾವು 3 ವರ್ಷ ಇಡೀ ರಾಜ್ಯ ಸುತ್ತಾಡಿ ಬಂದಿದ್ದೇವೆ. ಮಠ ಕಟ್ಟೋಕೆ ನೀವು 10 ಪೈಸೆಯಾದರೂ ಹಣ ನೀಡಿದ್ದೀರಾ ಹೇಳಿ? ಸಮಾಜದಿಂದ ಬೆಳೆದು ಸಮಾಜದ ಸ್ವಾಮೀಜಿಗೆ ಅಗೌರವ ತೋರುವುದು ಎಷ್ಟು ಸರಿ ಅಂತ ಹಳ್ಳಿಹಕ್ಕಿ ವಿಶ್ವನಾಥ್ ಕಿಡಿಕಾರಿದ್ದಾರೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಸ್ವಾಮೀಜಿ ವಿಚಾರದಲ್ಲಿ ಆರ್ಎಸ್ಎಸ್ ಎಳೆದು ತಂದು ತುಂಬಾ ಚಿಕ್ಕವರಾಗಿದ್ದೀರಿ. ಇದು ನಿಮಗೆ ಶೋಭೆ ತರುವಂತದ್ದಲ್ಲ. ನಿಮ್ಮ ಇಬ್ಬಂದಿತನವನ್ನು ನಿಲ್ಲಿಸಬೇಕು. ಸಿದ್ದರಾಮಯ್ಯ ಅವರಿಗೆ ಬಹುಪರಾಕ್ ಹೇಳುವವರು ಬೇಕು, ಅವರು ಮುಂದೆ ಇದ್ದರೆ ಉಳಿದವರೆಲ್ಲ ಹಿಂದೆ ಇರಬೇಕು ಅಂತ ಬಯಸುವವರು ಎಂದು ವಾಗ್ದಾಳಿ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








