‘ರಿಯಲ್ ಹೀರೋ’ ಸೋನು ಸೂದ್ ಗೆ ಹೈಕೋರ್ಟ್ ನಲ್ಲಿ ಹಿನ್ನೆಡೆ..!
ಮುಂಬೈ: ಮುಂಬೈ ಮಹಾನಗರದ ಜುಹು ಪ್ರದೇಶದಲ್ಲಿರುವ ತನ್ನ ವಸತಿ ಕಟ್ಟಡವನ್ನು ಅನುಮತಿ ಇಲ್ಲದೆ ವಾಣಿಜ್ಯ ಕಟ್ಟಡವಾಗಿ ಪರಿವರ್ತಿಸಿದ್ದಕ್ಕೆ ಬಿಎಂಸಿ ನೀಡಿದ್ದ ನೋಟಿಸ್ ವಿರುದ್ಧ ನಟ ಸೋನು ಸೂದ್ ಸಲ್ಲಿಸಿರುವ ಮೇಲ್ಮನವಿ ಹಾಗೂ ಮಧ್ಯಂತರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಮೂರು ಭಾಷೆ.. ಸಾವಿರ ಬೆಳ್ಳಿ ಪರದೆ ಮೇಲೆ ಪೊಗರು ತೋರಿಸಲಿದ್ದಾರೆ ಧೃವ ಸರ್ಜಾ
ಸೋನು ಸೂದ್ ಮೇಲ್ಮನವಿ ಹಾಗೂ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರು, ಕಾನೂನು ಶ್ರದ್ಧೆಯಿಂದ ಇರುವವರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
140 ದಿನಗಳ ಸೆರೆವಾಸದ ಬಳಿಕ ‘ತುಪ್ಪದ ಬೆಡಗಿ’ಗೆ ಸಿಕ್ತು ಬೇಲ್ ಭಾಗ್ಯ..!
ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಿಎಂಸಿ ನೀಡಿದ್ದ ನೋಟಿಸ್ ಗೆ ಉತ್ತರಿಸಲು 10 ವಾರಗಳ ಕಾಲಾವಕಾಶವನ್ನು ನೀಡಬೇಕು. ಅಕ್ರಮ ಕಟ್ಟಡ ಧ್ವಂಸ ಕಾರ್ಯ ಆರಂಭಿಸದಂತೆ ಬಿಎಂಸಿಗೆ ನಿರ್ದೇಶನ ನೀಡುವಂತೆ ಸೂದ್ ಪರ ವಕೀಲ ಅಮೋಘ್ ಸಿಂಗ್ ಅವರು ಹೈಕೋರ್ಟ್ ಗೆ ಮನವಿ ಮಾಡಿದರು.
ಸಿನಿಪ್ರಿಯರಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ : ಸ್ಟಾರ್ ಸಿನಿಮಾಗಳ ರಿಲೀಸ್ ಗೆ ಡೇಟ್ ಫಿಕ್ಸ್ ..! ಡೀಟೇಲ್ಸ್..!
ಸೋನು ಸೂದ್ ಅವರು 6 ಅಂತಸ್ತಿನ ವಸತಿ ಕಟ್ಟಡ ಶಕ್ತಿ ಸಾಗರ್ ನಲ್ಲಿ ಅಗತ್ಯ ಅನುಮತಿ ತೆಗೆದುಕೊಳ್ಳದೆ ಅದನ್ನು ಹೋಟೆಲ್ ಆಗಿ ಪರಿವರ್ತಿಸಿದ್ದರು ಎಂದು ಬಿಎಂಸಿ ಆರೋಪಿಸಿ ದೂರು ದಾಖಲಿಸಿತ್ತು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel