ಸಿನಿಪ್ರಿಯರಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ : ಸ್ಟಾರ್ ಸಿನಿಮಾಗಳ ರಿಲೀಸ್ ಗೆ ಡೇಟ್ ಫಿಕ್ಸ್ ..! ಡೀಟೇಲ್ಸ್..!
ಕನ್ನಡದಲ್ಲಿ ಲಾಕ್ ಡೌನ್, ಥಿಯೇಟರ್ ಬಂದ್, ಥಿಯೇಟರ್ ಗಳಲ್ಲಿ ಪೂರ್ಣ ಪ್ರಮಾಣದ ಸೀಟಿಂಗ್ ವ್ಯವ್ಸತೇ ಇಲ್ಲದೇ ಹೀಗೆ ನಾನಾ ಸಮಸ್ಯೆಗಳಿಂದ ಯಾವ ಸ್ಟಾರ್ ನಟರ ಸಿನಿಮಾಗಳು ಸಹ ತೆರೆ ಕಾಣದೇ ಸಿನಿಪ್ರಿಯರು ನಿರಾಸೆಯಾಗಿದ್ದಾರೆ.
ಆದ್ರೆ 2021 ರಲ್ಲಿ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಈ ವರ್ಷ ಸಿನಿಮಾ ವರ್ಷವೇ ಅಂತ ಹೇಳುದ್ರೂ ತಪ್ಪಾಗೋದಿಲ್ಲ. ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳು , ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಅಷ್ಟೇ ಅಲ್ದೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಹೌದು, ಈ ಸಂಬಂಧ ಬಿಡುಗಡೆಗೆ ಸಿದ್ಧವಿರುವ ಸ್ಟಾರ್ ಸಿನಿಮಾಗಳು ಮತ್ತು ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರು ಅಧಿಕೃತವಾಗಿ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಈ ಮೂಲಕ ಕಳೆದ 3-4 ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ಬಿಗ್ ಸ್ಟಾರ್ ಸಿನಿಮಾಗಳ ಬಿಡುಗಡೆಯ ಬಗ್ಗೆ ಹರಿದಾಡುತ್ತಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದ್ದು ಸಿನಿ ಪ್ರಿಯರ ಹ್ಯಾಪಿ ಮೋಡ್ ಆನ್ ಆಗಿದೆ.
ಫೆಬ್ರವರಿ ಮೊದಲ ವಾರದಿಂದ ಮೇ ಎರಡನೇ ವಾರದವರೆಗೆ ಸಿನಿಮಾಗಳ ಜಾತ್ರೆ ಆರಂಭವಾಗಲಿದೆ. ಕನ್ನಡದ ಸ್ಟಾರ್ ನಟರು ಮತ್ತು ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಚಿತ್ರರಂಗದಲ್ಲಿ ಚಟುವಟಿಕೆಗಳು ಮತ್ತಷ್ಟು ಗರಿಗೆದರಿದೆ. ಇನ್ನು ಒಂದರ ಹಿಂದೊಂದರಂತೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಥಿಯೇಟರ್ಗಳಲ್ಲಿ ಸ್ಟಾರ್ ವಾರ್ ಗೆ ಕಾರಣವಾಗದಂತೆ, ಎರಡು ವಾರಗಳ ಅಂತದಲ್ಲಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಅಂದ್ಹಾಗೆ ಬಹುನಿರೀಕ್ಷೆಯ ಸಿನಿಮಾಗಳ ರಿಲೀಸ್ ಲಿಸ್ಟ್ ನಲ್ಲಿ ಸಲಗ , ಪೊಗರು , ರಾಬರ್ಟ್ ಇನ್ನೂ ಅನೇಕ ಚಿತ್ರಗಳು ಬಿಡುಗಡೆಯಾಗಲಿವೆ.
ಸಿನಿಮಾಗಳ ಬಿಡುಗಡೆ ಪಟ್ಟಿ ಹೀಗಿದೆ.
ಫೆಬ್ರವರಿ 5 : ಪ್ರಜ್ವಲ್ ದೇವರಾಜ್ ಅಭಿನಯದ ‘ ಇನ್ಸ್ ಪೆಕ್ಟರ್ ವಿಕ್ರಮ್’
ಫೆಬ್ರವರಿ 19 : ಬಹುನಿರೀಕ್ಷೆಯ, ಧ್ರುವ ಸರ್ಜಾ ಅಭಿನಯದ ‘ಪೊಗರು’
ಮಾರ್ಚ್ 11 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ‘ರಾಬರ್ಟ್’
ಏಪ್ರಿಲ್ 01: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’
ಏಪ್ರಿಲ್ 15: ದುನಿಯಾ ವಿಜಯ್ ಅಭಿನಯದ ‘ಸಲಗ’
ಏಪ್ರಿಲ್ 29: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’
ಮೇ 14 : ಶಿವರಾಜಕುಮಾರ್ ಅಭಿನಯದ ‘ಭಜರಂಗಿ-2’
ಮೂರು ಭಾಷೆ.. ಸಾವಿರ ಬೆಳ್ಳಿ ಪರದೆ ಮೇಲೆ ಪೊಗರು ತೋರಿಸಲಿದ್ದಾರೆ ಧೃವ ಸರ್ಜಾ
ಗರ್ಲ್ ಫ್ರೆಂಡ್ ಜೊತೆ ದೋಸೆ ತಿನ್ನುತ್ತಿದ್ದ ಪತಿಯನ್ನು ಹಿಡಿದ ಪತ್ನಿ – ದೂರು ದಾಖಲಿಸಲು ಪೊಲೀಸರ ನಿರಾಕರಣೆ
ಆರ್ಕೆಸ್ಟ್ರಾ ಕಲಾವಿದರ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel