ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾಯಕರೇ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆ ಯಾಕೆ..?

admin by admin
January 21, 2021
in Newsbeat, Saaksha Special, ಎಸ್ ಸ್ಪೆಷಲ್
corona-
Share on FacebookShare on TwitterShare on WhatsappShare on Telegram

ನಾಯಕರೇ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆ ಯಾಕೆ..?

ಹೆಮ್ಮಾರಿ ಕೊರೊನಾ ವಿರುದ್ಧ ಭಾರತ ಲಸಿಕಾ ಮಹಾಯಜ್ಞವನ್ನು ಆರಂಭಿಸಿದ್ದು, ದೇಶದ ಎಲ್ಲಾ ಕಡೆ ಲಸಿಕೆ ವಿತರಣೆ ಅಭಿಯಾನ ಬಿರುಸಿನಿಂದ ಸಾಗಿದೆ. ಆದ್ರೆ ಎಲ್ಲವುದಕ್ಕೂ ಬೇರೆ ದೇಶವನ್ನ ಮಾದರಿಯಾಗಿ ತೆಗೆದುಕೊಳ್ಳುವ ನಮ್ಮ ಘಟಾನುಘಟಿ ನಾಯಕರು ಮಾತ್ರ ಲಸಿಕೆ ವಿಚಾರದಲ್ಲಿ ಸೈಲಂಟ್ ಆಗಿದ್ದಾರೆ. ಬಾಯಿಬಿಟ್ಟರೇ ಗಂಟೆ ಗಟ್ಟಲೇ ಭಾಷಣೆ ಬಿಗಿಯೋ ನಮ್ಮ ನಾಯಕರು ಲಸಿಕೆ ವಿಚಾರದಲ್ಲಿ ವಿಶ್ವದ ಬೇರೆ ನಾಯಕರನ್ನು ಫಾಲೋ ಮಾಡ್ತಿಲ್ಲ. ಯಾವೊಬ್ಬ ಜನಪ್ರತಿನಿಧಿ ಕೂಡ ಲಸಿಕೆ ಹಾಕಿಸಿಕೊಳ್ಳು ಮುಂದೆ ಬರ್ತಾ ಇಲ್ಲ. ಲಸಿಕೆ ವಿಚಾರದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನಾಯಕರು, ವ್ಯಾಕ್ಸಿನ್ ಹಾಕಿಸಿಕೊಳ್ಳುವ ವಿಚಾರದಲ್ಲಿ ಗಪ್ ಚುಪ್ ಆಗ್ಬಿಟ್ಟಿದ್ದಾರೆ.

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

ಭಾರತದಲ್ಲಿ ಲಸಿಕಾ ಅಭಿಯಾನ ಆರಂಭಕ್ಕೆ ಭಾರಿ ಹೈಪ್ ನೀಡಲಾಗಿತ್ತು. ಸೂಪರ್ ಸ್ಪೀಡ್ ನಲ್ಲಿ ಶುರುವಾಗ ಅಭಿಮಾನ ಈಗ ಆಮೆಗತಿಯಲ್ಲಿ ಸಾಗುತ್ತಿದೆ. ಅಂದ್ರೆ ಲಸಿಕೆ ವಿತರಣೆಯಲ್ಲಿ ಕೇಂದ್ರ ಸರ್ಕಾರ ಹಾಕಿಕೊಂಡಿದ್ದ ಎಲ್ಲಾ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿವೆ. ದೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಲಸಿಕಾ ಕೇಂದ್ರಗಳನ್ನ ಸ್ಥಾಪಿಸಲಾಗಿದ್ದು, ಒಂದು ವ್ಯಾಕ್ಸಿನೇಷನ್ ಸೆಂಟರ್ ನಲ್ಲಿ ದಿನಕ್ಕೆ 100 ಜನರಿಗೆ ಲಸಿಕೆ ನೀಡುವ ಲೆಕ್ಕಾಚಾರವನ್ನು ಕೇಂದ್ರ ಹಾಕಿಕೊಂಡಿತ್ತು. ಆದ್ರೆ ಇದು ಈಗ ಉಲ್ಟಾ ಆಗಿದೆ. ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ವಾರಿಯರ್ ಗಳೇ ಲಸಿಕೆ ಹಾಕಿಸಿಕೊಳ್ಳಲು ಹೀಗೆ ಹಿಂದೇಟು ಹಾಕುತ್ತಿದ್ದರೇ ಮುಂದೆ ಜನರು ಲಸಿಕೆಯನ್ನ ಹಾಕಿಸಿಕೊಳ್ತಾರಾ ಅನ್ನೋ ಪ್ರಶ್ನೆ ಎದಿದ್ದೆ.

corona-

ಇದಕ್ಕೆ ಕಾರಣವೇನು..?

ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಲು ಪ್ರಮುಖ ಕಾರಣ ನಮ್ಮ ನಾಯಕರು. ಹೌದು..! ಬೇರೆ ದೇಶಗಳಲ್ಲಿ ಕೊರೊನಾ ಲಸಿಕೆಯನ್ನ ಕಂಡು ಹಿಡಿದ ಬಳಿಕ ಮೊದಲು ಆ ದೇಶದ ಪ್ರಮುಖ ನಾಯಕರು ಲಸಿಕೆಯನ್ನು ಹಾಕಿಸಿಕೊಂಡು ಜನರಲ್ಲಿ ಧೈರ್ಯ ತುಂಬಿದ್ದಾರೆ. ಅಮೆರಿಕಾ ಅಧ್ಯಕ್ಷ 78 ವರ್ಷದ ಜೋ ಬಿಡೆನ್, ಸೌದಿಯ ರಾಜ 85 ವರ್ಷದ ಸಲ್ಮಾನ್, ಬ್ರಿಟನ್ ನ ರಾಣಿ 94 ವರ್ಷದ ಎಲಿಜಿಬಟ್ ಲಸಿಕೆ ಹಾಕಿಸಿಕೊಂಡು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದಲ್ಲದೇ ಇಸ್ರೇಲ್, ರಷ್ಯಾದ ಪ್ರಮುಖ ನಾಯಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಜನ ಸಾಮಾನ್ಯರಲ್ಲಿ ಇರುವ ಒಂದಿಷ್ಟು ಸಂಶಯಗಳನ್ನು ದೂರ ಮಾಡಿದ್ದಾರೆ. ಹಾಗೆ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜನರನ್ನ ಪ್ರೋತ್ಸಾಹಿಸಿದ್ದಾರೆ. ಆದ್ರೆ ನಮ್ಮ ದೇಶದಲ್ಲಿ ಮಾತ್ರ ಯಾವೊಬ್ಬ ರಾಜಕಾರಣಿ ಕೂಡ ಲಸಿಕೆಯನ್ನು ಹಾಕಿಸಿಕೊಂಡಿಲ್ಲ. 57 ಇಂಚಿನ ಪ್ರಧಾನಿ ಮೋದಿಯಾಗಲಿ ಅಥವಾ ನಾನು ಯಾರಿಗೂ ಹೆದರುವುದಿಲ್ಲ ಅನ್ನೋ ರಾಹುಲ್ ಗಾಂಧಿಯಾಗಲಿ ನಾವು ಲಸಿಕೆ ಹಾಕಿಸಿಕೊಳ್ಳುತ್ತೇವೆ ಅಂತಾ ಮುಂದೆ ಬಂದಿಲ್ಲ.

ಬೇರೆ ದೇಶದಲ್ಲಿ 80 ವರ್ಷದ ಮೇಲ್ಪಟ್ಟ ನಾಯಕರೇ ಧೈರ್ಯವಾಗಿ ಲಸಿಕೆಯನ್ನ ಹಾಕಿಸಿಕೊಂಡಿದ್ದಾರೆ. ಆದ್ರೆ ನಮ್ಮ ಯುವ, ಹಿರಿಯ ನೇತಾರರು ನಾವು ಲಸಿಕೆ ಹಾಕಿಸಿಕೊಳ್ಳುತ್ತೇವೆ ಅಂತ ಹೇಳಿಲ್ಲ. ಯಾಕೆ ಇವರಿಗೆ ಪ್ರಾಣದ ಮೇಲೆ ಅಷ್ಟೊಂದು ಆಸೆನಾ..? ಯಾಕೆ ನಮ್ಮ ನಾಯಕರು ಲಸಿಕೆ ಹಾಕಿಸಿಕೊಂಡಿಲ್ಲ, ಹಾಕಿಸಿಕೊಳ್ಳುತ್ತಿಲ್ಲ..?

ಇದಕ್ಕೆ ನಾವು ಕೊರೊನಾ ವಾರಿಯರ್ಸ್‍ಗೆ ಆಧ್ಯತೆ ಕೊಡ್ತೀವಿ.. ಮೊದಲು ಅವರನ್ನ ರಕ್ಷಿಸಬೇಕು.. ಕೊರೊನಾ ವಿರುದ್ಧ ಆರಂಭದಿಂದಲೂ ಹೋರಾಡುತ್ತಿರೋರ್ಗೆ ನಾವು ಮೊದಲು ಲಸಿಕೆ ಕೊಡ್ತೀವಿ ಅಂತ ಉತ್ತರ ಕೊಡಬಹುದು. ಆದ್ರೆ ಮನೆಯ ಯಜಮಾನನೇ ಧೈರ್ಯ ಮಾಡದೇ ಇದ್ದಾಗ ಇನ್ನ ಕುಟುಂಬಸ್ಥರು ಧೈರ್ಯ ಮಾಡ್ತಾರಾ..?
ಎಲ್ಲವುದರಲ್ಲೂ ಮುಂದೆ ನಿಲ್ಲೋ ನಮ್ಮ ಲೀಡರ್ ಗಳು ಲಸಿಕಿ ಹಾಕಿಸಿಕೊಳ್ಳುವುದರಲ್ಲೂ ಮುಂದೆ ನಿಲ್ಲಬೇಕಿತ್ತು ಅಲ್ವಾ..? ಮೊದ್ಲು ಕೊರೊನಾ ವಾರಿಯರ್ಸ್ ಗೆ ಅಂತ ಹೇಳ್ತಾರೆ ಸರಿ. ಆದ್ರೆ ನಮ್ಮ ನಾಯಕರು ಈ ದೇಶದ ರಕ್ಷಕರಲ್ವಾ..? ನಮ್ಮ ರಕ್ಷಕರೂ ಅವ್ರೆ ಅಲ್ವಾ..? ಸಾರಿ ಸಾರಿ… ಪ್ರಧಾನ ಸೇವಕರು.

corona-

ಅಂದಹಾಗೆ ರಾಜಮಹಾರಾಜರ ಕಾಲದಲ್ಲಿ. ಸೇವಕರು ಅನ್ನೋರು ತಮಗೆ ಏನಾದ್ರೂ ಪರವಾಗಿಲ್ಲ ನನ್ನ ರಾಜ ಚೆನ್ನಾಗಿರ್ಬೇಕು ಅಂತ ಬಯಸ್ತಿದ್ರು.. ಆಗಾದ್ರೆ ಈಗ ನಮ್ಮ ಸೇವಕರು ಅಂತ ಹೇಳಿಕೊಳ್ಳೋ ಜನ ಪ್ರತಿನಿಧಿಗಳ್ಯಾಕೆ ಇನ್ನೂ ಲಸಿಕೆಯನ್ನ ತೆಗೆದುಕೊಂಡಿಲ್ಲ…?

ಲಸಿಕೆಯಿಂದ ಯಾವುದೇ ತೊಂದರೇ ಇಲ್ಲ ಅಂತಾ ಅವರು ಗಂಟಾಘೋಷವಾಗಿ ಹೇಳ್ಬುವುದು. ಆ ಮೂಲಕ ಮಾತಿನಲ್ಲೇ ಮರಳು ಮಾಡಿ ಮೋಡಿ ಮಾಡ್ಬಹುದು. ಆದ್ರೆ ಲಸಿಕೆಯನ್ನ ಹಾಕಿಸಿಕೊಂಡು, ಇದು ಸೇಫ್ ಅನ್ನೋದಕ್ಕೂ, ಹಾಕಿಸಿಕೊಳ್ಳದೇ ಇದು ಸೇಫ್ ಅನ್ನೋದಕ್ಕೂ ವ್ಯತ್ಯಾಸ ಇದೆ ಅಲ್ವಾ..?

ಇನ್ನು ಎಲ್ಲಿಯವರಿಗೆ ದೇಶದ ಪ್ರಮುಖರು ಲಸಿಕೆಯನ್ನ ಹಾಕಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಲಸಿಕಾ ಅಭಿಯಾನ ವೇಗ ಪಡೆದುಕೊಳ್ಳೋದಿಲ್ಲ. ಈಗಾಗಲೇ ಲಸಿಕೆ ವಿಚಾರವಾಗಿ ವೈದ್ಯರು ತಕರಾರು ಎತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಅಡ್ಡ ಪರಿಣಾಮದ ಕೇಸ್ ಗಳು ದಾಖಲಾಗುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಕಾರ್ಯಕರ್ತರಾಗಲಿ ಕಣ್ಣು ಮುಚ್ಚಿಕೊಂಡು ಲಸಿಕೆಯನ್ನ ಹೇಗೆತಾನೆ ಹಾಕಿಸಿಕೊಳ್ತಾರೆ. ವರದಿಗಳ ಪ್ರಕಾರ ದೇಶದಲ್ಲಿ ಲಸಿಕೆ ವಿತರಣೆ ವಿಚಾರದಲ್ಲಿ ಇಲ್ಲಿಯವರಿಗೆ ಸರ್ಕಾರ ಅಂದುಕೊಂಡಿದ್ದ ಅಂಕಿಅಂಶವನ್ನ ಮುಟ್ಟಿಲ್ಲ ಅಂತ ಹೇಳಲಾಗ್ತಿದೆ. ಆರಂಭದಲ್ಲೇ ಮಹಾ ಅಭಿಯಾನ ಈ ರೀತಿಯಾದ್ರೆ ಮುಂದೆ ಗತಿಏನು..?

ಮೊದಲು ನಮಗೆ ಮಾದರಿಯಾದವರು, ದೇಶವನ್ನ ರಕ್ಷಣೆ ಮಾಡಲೆಂದೇ ನಾವು ಬಂದವರು ಅನ್ನೋ ಜನಪ್ರತಿನಿಧಿಗಳು ಲಸಿಕೆ ಹಾಕಿಸಿಕೊಂಡು ಜನರಲ್ಲಿ ಲಸಿಕೆ ಬಗ್ಗೆ ವಿಶ್ವಾಸ ತುಂಬುವ ಕೆಲಸ ಮಾಡಲಿ.. ಆಗ ಮಾತ್ರ ಕೊರೊನಾ ವಿರುದ್ಧ ಹೋರಾಟ ಮುಂದುವರಿಸಲು ಸಾಧ್ಯ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: CoronaCorona vaccinenarendramodi
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram