ಮನೀಲಾ: ಕೊರೊನಾ ಹೊಡೆತಕ್ಕೆ ವಿಶ್ವದ ಬಹುತೇಕ ದೇಶಗಳು ಲಾಕ್ ಡೌನ್ ಆಗಿವೆ. ಅದರಂತೆ ಫಿಲಿಪೈನ್ಸ್ ದೇಶವೂ ಲಾಕ್ ಡೌನ್ ಆಗಿದೆ. ಅಲ್ಲಿ ಕೊರೊನಾ ತಡೆಗೆ ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಕ್ವಾರಂಟೈನ್ ಅನ್ನು ಉಲ್ಲಂಘಿಸುವವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಅಧ್ಯಕ್ಷ ರೊಡ್ರಿಗೊ ಡಟರ್ಟೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸರ್ಕಾರಿ ಮಾಧ್ಯಮವೊಂದರಲ್ಲಿ ರೊಡ್ರಿಗೊ ಮಾತನಾಡುತ್ತಾ..’ನೆನಪಿಡಿ, ನೀವು ಎಡಪಂಥೀಯರು ನೀವು ಸರ್ಕಾರವಲ್ಲ. ತೊಂದರೆ ಮತ್ತು ಗಲಭೆಗಳಿಗೆ ಕಾರಣವಾಗಬೇಡಿ, ಏಕೆಂದರೆ ಈ ಕೋವಿಡ್ ಮಹಾಮಾರಿ ಅಂತ್ಯ ಕಾಣುವವರೆಗೆ ನಿಮ್ಮನ್ನು ಬಂಧನದಲ್ಲಿರಿಸಲು ಆದೇಶಿಸುತ್ತೇನೆ’ ಎಂದು ತಿಳಿಸಿದ್ದಾರೆ. ಅಲ್ಲದೇ ಒಂದು ವೇಳೆ ಯಾರಾದರು ಕ್ವಾರಂಟೈನ್ ಉಲ್ಲಂಘಿಸಿದರೆ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಪೊಲೀಸರಿಗೆ ಆದೇಶಿಸಿದ್ದಾರೆ.








