ಹೊಸ ಅವತಾರದಲ್ಲಿ ಮಾರುಕಟ್ಟೆಗೆ ‘ರಾಯಲ್ ಎನ್ಫೀಲ್ಡ್’ ರಾಯಲ್ ಆಗಿ ಎಂಟ್ರಿ…!
ರಾಯಲ್ ಎನ್ಫೀಲ್ಡ್ ಬೈಕ್ ಯಾರಿಗೆ ತಾನೆ ಇಷ್ಟ ಇಲ್ಲ.. ಅದ್ರಲ್ಲೂ ಯುವಕರಿಗೆ ಈ ಬೈಕ್ ಮೇಲಿನ ಮೋಹ ಹೆಚ್ಚಾಗಿಯೇ ಇದೆ. ವಿಶೇಷವಾದ ಡಿಸೈನ್ ಗಳ, ಮಾಡೆಲ್ ಗಳ ಮೂಲಕ ರಾಯಲ್ ಎನ್ ಫೀಲ್ಡ್ ಬೈಕ್ಗಳು ಗ್ರಾಹಕರ ಗಮನವನ್ನ ಸೆಳೆಯುತ್ತಲೇ ಇರುತ್ತವೆ.
ಬುಲೆಟ್ ಕ್ರೇಜ್ ಯಾವತ್ತೂ ಕಡಿಮೆಯಾಗೋದೆ ಇಲ್ಲ. ಬುಲೆಟ್ ಗಿರೋ ರೇಂಜ್ ಕಡಿಮೆಯಾಗೋ ಚಾನ್ಸೇ ಇಲ್ಲ. ಇದೀಗ ಬುಲೆಟ್ ಪ್ರಿಯರಿಗಾಗಿಯೇ ಮಾರುಕಟ್ಟೆಗೆ ರಾಯಲ್ ಎನ್ ಫೀಲ್ಡ್ ಮತ್ತೊಂದು ಹೊಸ ಅವತಾರದಲ್ಲಿ ಎಂಟ್ರಿಯಾಗಲಿದೆ. ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಕೆಲವೇ ದಿನಗಳಲ್ಲಿ ಮೂರು ಹೊಸ ಅವತಾರಗಳಲ್ಲಿ ಬರಲಿದೆ.
ಸಲಾರ್ ಗೆ ಸವಾಲ್ ಹಾಕಲಿದ್ದಾರೆ ತಮಿಳಿನ ಸ್ಟಾರ್ ನಟ..!
ಹೊಸ ಮಾದರಿಗಳು
ಪರಿಷ್ಕೃತ ಹಿಮಾಲಯನ್ ಬೈಕ್ಗಳು ಮೊದಲಿದ್ದ ವಿನ್ಯಾಸವನ್ನೇ ಮುಂದುವರಿಸಲಿವೆ. ಫ್ಯುಯಲ್ ಟ್ಯಾಂಕ್ ನ ಬಳಿ ಕೆಲ ಬದಲಾವಣೆಗಳನ್ನ ತರಲಾಗಿದೆ. ಆದರೆ ಪರಿಷ್ಕೃತ ಹಿಮಾಲಯನ್ ಬೈಕ್ ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಬಣ್ಣದ ಬೈಕ್ ಗಳು ಆಯ್ಕೆಗೆ ಸಿಗಲಿದೆ. ಈ ಬಾರಿ ಹಿಮಾಲಯನ್ ಬೆಳ್ಳಿ, ಮ್ಯಾಟ್ ಕಪ್ಪು ಹಾಗೂ ಪೈನ್ ಹಸಿರು ಬಣ್ಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಇದು ಇಂಜಿನ್ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಈಗಿರುವ ಹಿಮಾಲಯನ್ ಬೈಕ್ಗಿಂತ ಪರಿಷ್ಕೃತ ಬೈಕ್ನ ಬೆಲೆ ಕೊಂಚ ಹೆಚ್ಚಿರಲಿದೆ. ಪ್ರಸ್ತುತ ಹಿಮಾಲಯನ್ ಮಾಡಲ್ 1.91 ಲಕ್ಷದಿಂದ 1.96 ಲಕ್ಷಕ್ಕೆ ಸಿಗುತ್ತೆ.
ಇನ್ನೂ ಈಗಿರುವ ಬಿಳಿ ಬಣ್ಣದ ಬೈಕ್ಗಳನ್ನ ಕಂಪನಿ ನಿಲ್ಲಿಸುವ ಸಾಧ್ಯತೆ ಇದೆ. ಈ ಜಾಗಕ್ಕೆ ಗ್ರೇವೆಲ್ ಗ್ರೇ, ಸ್ಲೀಟ್ ಗ್ರೇ, ಸ್ನೋ ವೈಟ್, ಗ್ರಾನೈಟ್ ಬ್ಲ್ಯಾಕ್, ರಾಕ್ ರೆಡ್ ಮತ್ತು ಲೇಕ್ ಬ್ಲೂ ಬಣ್ಣಗಳ ಆಯ್ಕೆಯನ್ನ ನೀಡಲಾಗುತ್ತೆ.
ಯಶ್, ಚರಣ್ ಜೊತೆ ಶಂಕರ್ ಹಾಲಿವುಡ್ ರೇಂಜ್ ಸಿನಿಮಾ
2021ರ ಹಿಮಾಲಯನ್ ಬೈಕ್ನ ಪ್ರಮುಖ ನವೀಕರಣ ಅಂದರೆ ಟ್ರಿಪ್ಪರ್ ನ್ಯಾವಿಗೇಷನ್. ರಾಯಲ್ ಎನ್ಫೀಲ್ಡ್ ಮೆಟೋರ್ 350 ಬೈಕ್ನಲ್ಲಿ ಮೊದಲು ಇದನ್ನ ಪರಿಚಯಿಸಲಾಗಿತ್ತು. ಇದು ನ್ಯಾವಿಗೇಷನ್ ಪರದೆಯನ್ನ ಹೊಂದಿರೋದ್ರಿಂದ ನೀವು ಮೊಬೈಲ್ನಲ್ಲಿ ಮ್ಯಾಪ್ ನೋಡೋದು ತಪ್ಪುತ್ತೆ. ನಿಮ್ಮ ಮೊಬೈಲ್ನ್ನ ಈ ಸ್ಕ್ರೀನ್ ಜೊತೆ ಕನೆಕ್ಟ್ ಮಾಡಿದ ಬಳಿಕ ಬೈಕ್ನ ನೇವಿಗೇಷನ್ ಸ್ಕ್ರೀನ್ನಲ್ಲೇ ನಿಮಗೆ ನೀವು ತಲುಪಬೇಕಾದ ಜಾಗದ ನಕ್ಷೆ ಕಾಣಲಿದೆ.
ಬಸ್ ನಲ್ಲಿ ದೈಹಿಕ ಕಿರುಕುಳ : ಆರೋಪಿ ಅಂದರ್, ಪೊಲೀಸರೆದುರೇ ಕಾಮುಕನಿಗೆ ಕಪಾಳ ಮೋಕ್ಷ ಮಾಡಿದ ಯುವತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








