ಯಶ್, ಚರಣ್ ಜೊತೆ ಶಂಕರ್ ಹಾಲಿವುಡ್ ರೇಂಜ್ ಸಿನಿಮಾ
ಇಂಡಿಯನ್ ಸಿನಿಮಾದ ಸ್ಟಾರ್ ನಿರ್ದೇಶಕ ಶಂಕರ್, ಕನ್ನಡದ ರಾಕಿಂಗ್ ಸ್ಟಾರ್ , ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ಜೊತೆ ಸಿನಿಮಾ ಮಾಡಲಿದ್ದಾರಂತೆ.
ಅಂದ್ರೆ ಮೆಗಾ ಬುಲ್ಲೋಡು ರಾಮ್ ಚರಣ್, ರಾಖಿ ಭಾಯ್ ಯಶ್ ಅವರ ಜೊತೆ ಭಾರಿ ಮಲ್ಟಿಸ್ಟಾರ್ ಸಿನಿಮಾ ಮಾಡಲು ಶಂಕರ್ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ.
ಶಂಕರ್ ಅಂದ್ರೆ ಭಾರಿ ಬಿಗ್ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್. ಭಾರಿ ಸೆಟ್, ಭಾರಿ ಗ್ರಾಫಿಕ್ಸ್ ಶಂಕರ್ ಸ್ಪೇಷಾಲಿಟೀಸ್. ಸದ್ಯ ಅವರು ಇಂಡಿಯನ್ ಸೀಕ್ವೆಲ್ ಇಂಡಿಯನ್ 2 ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ.
ಇದಾದ ಬಳಿಕ ಭಾರಿ ಮಲ್ಟಿಸ್ಟಾರರ್ ಸಿನಿಮಾಗೆ ಪ್ಲಾನ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದರಲ್ಲಿ ಮೆಗಾ ಪವರ್ ರಾಮ್ ಚರಣ್, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿದ್ದಾರೆ ಅಂತ ಹೇಳಲಾಗುತ್ತಿದೆ.
ಚರಣ್ ಮತ್ತು ಯಶ್ ಅವರೊಂದಿಗೆ ಐತಿಹಾಸಿಕ ಯುದ್ಧದ ಹಿನ್ನೆಲೆ ಇರುವ ಸಿನಿಮಾ ಮಾಡಲು ಶಂಕರ್ ಬಯಸುತ್ತಾರಂತೆ. ‘ಇಂಡಿಯನ್ 2’ ಚಿತ್ರ ಮುಗಿದ ನಂತರ ಚಿತ್ರ ಸೆಟ್ಗಳಿಗೆ ಬರಲಿದೆ ಅನ್ನೋದು ಕಾಲಿವುಡ್ ಖಬರ್.
ಸದ್ಯ ರಾಮ್ ಚರಣ್ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಪೂರಿ ಜಗನಾಥ್ ಜೊತೆ ಅವರು ಸಿನಿಮಾ ಮಾಡಲಿದ್ದಾರೆ ಅನ್ನೋ ಮಾತುಗಳು ಟಾಲಿವುಡ್ ನಲ್ಲಿ ಕೇಳಿಬರುತ್ತಿವೆ.
ಇತ್ತ ಯಶ್ ಕೂಡ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೆಲಸಗಳಲ್ಲಿ ಬ್ಯೂಸಿ ಇದ್ದಾರೆ. ಇದಾದ ಬಳಿಕ ರಾಣಾ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಹೀಗಾಗಿ ಶಂಕರ್ ಅವರ ಈ ಕ್ರೇಜಿ ಮಲ್ಟಿಸ್ಟಾರರ್ ಸಿನಿಮಾ 2022 ರ ದ್ವಿತೀಯಾರ್ಧದಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel