ಜೂನ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ : ಗಾಂಧಿಯೇತರರಿಗೆ ಪಟ್ಟ..?
ನವದೆಹಲಿ : ನೂರು ಮೂವತ್ತಕ್ಕೂ ಹೆಚ್ಚು ಇತಿಹಾಸಯುಳ್ಳ ಕಾಂಗ್ರೆಸ್ ಪಕ್ಷ ಸದ್ಯ ಸಂಕಷ್ಟ ಸ್ಥಿತಿಯಲ್ಲಿ ಸಿಲುಕಿದೆ. ತನ್ನ ಅಧ್ಯಕ್ಷರ ನೇಮಕ ಮಾಡಿಕೊಳ್ಳಲಾಗದಷ್ಟೂ ಹೀನಾಯ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ.
ಸೋಲಿನಿಂದ ಕಂಗಾಲಾಗಿರುವ ಕಾಂಗ್ರೆಸ್ ಗೆ ನಯಾ ಚಾರ್ಮ್ ನೀಡುವ ವ್ಯಕ್ತಿಯ ಅವಶ್ಯಕತೆ ಇದೆ. ಭಿನ್ನಾಭಿಪ್ರಾಯಗಳಿಂದ ಮೂಲೆಗೊಂದು ಗುಂಪಾಗಿರುವ ಕಾಂಗ್ರೆಸ್ ನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಲ್ಲರಲ್ಲೂ ಒಬ್ಬರಾಗಿ ಪಕ್ಷವನ್ನು ಕಟ್ಟಿ ಬೆಳೆಸುವ ನಾಯಕನ ಕೊರತೆ ಎದ್ದು ಕಾಣುತ್ತಿದೆ.
ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಇದ್ದರೂ ಅವರು ಮೊದಲಿನಂತೆ ಚುರುಕಾಗಿಲ್ಲ. ರಾಹುಲ್ ಗಾಂಧಿಯ ಮಾತನ್ನ ಹಿರಿಯ ನಾಯಕರು ಕೇಳ್ತಿಲ್ಲ. ಹಿರಿಯರ ಮಾತನ್ನ ಕಿರಿಯ ನಾಯಕರು ಕೇಳುತ್ತಿಲ್ಲ. ಇದೇ ಕಾರಣಕ್ಕೆ ದೇಶದಲ್ಲಿಂದು ಕಾಂಗ್ರೆಸ್ ಲೆಕ್ಕಕಿಲ್ಲದಂತಾಗಿದೆ.
ಇನ್ನು ಎಐಸಿಸಿಗೆ ಅಧ್ಯಕ್ಷರ ಆಯ್ಕೆ ಕಸರತ್ತು ಕಳೆದ ವರ್ಷದಿಂದಲೂ ನಡೆಯುತ್ತಲೇ ಇದೆ. ಇದೀಗ ಈ ಬಗ್ಗೆ ಕಾಂಗ್ರೆಸ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಿರುವಂತೆ ಕಾಣುತ್ತಿದ್ದು, ಜೂನ್ ನಲ್ಲಿ ಎಐಸಿಸಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಇಂದು ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆದಿದ್ದು, ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಮತ್ತು ಪಿ.ಚಿದಂಬರಂ, ಪಕ್ಷದ ನಾಯಕತ್ವ ಮತ್ತು ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಗಾಳ, ತಮಿಳುನಾಡು ಸೇರಿ ಐದು ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾಡಬೇಕು ಎಂದು ಅಶೋಕ್ ಗೆಹ್ಲೋಟ್, ಅಮರಿಂದರ್ ಸಿಂಗ್, ಎ.ಕೆ.ಆಂಟನಿ, ತಾರಿಕ್ ಅನ್ವರ್ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಚುನಾವಣೆ ಮೂಲಕ ಅಧ್ಯಕ್ಷ ಆಯ್ಕೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









