ADVERTISEMENT
Monday, September 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಇಂದಿನಿಂದ ಜನಧನ್ ಖಾತೆಗೆ ಹಣ ವರ್ಗಾವಣೆ…

admin by admin
April 3, 2020
in International, Newsbeat, Samagra karnataka
Share on FacebookShare on TwitterShare on WhatsappShare on Telegram

ಪ್ರಧಾನಮಂತ್ರಿಗಳ ಬಡವರ ಕಲ್ಯಾಣ ಯೋಜನೆಯಡಿ ನೀಡುವ ಹಣವನ್ನು ಜನಧನ್‌ ಯೋಜನೆ ಖಾತೆ ಇರುವ ಮಹಿಳೆಯರಿಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಕೋವಿಡ್‌19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂ. ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಆ
ಹಣವನ್ನು ಮುಂದಿನ ತಿಂಗಳ ಕಾಲ ಜನಧನ್‌ ಖಾತೆಗಳಿಗೆ ನೇರ ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ಪ್ರಧಾನಮಂತ್ರಿಗಳ ಜನಧನ್‌ ಯೋಜನೆಯ ಖಾತೆ ಇರುವವರ ಮಹಿಳೆಯರಿಗೆ ಏಪ್ರಿಲ್‌ 2020ರ ಅವಧಿಯ 500 ರೂ.ಗಳನ್ನು ಏಪ್ರಿಲ್‌ 2, 2020ರ ಬೆಳಗಿನ ಹೊತ್ತಿಗೆ ಆಯಾ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಖಾತೆದಾರರು, ಬ್ಯಾಂಕ್‌ನಿಂದ ಹಣ ಪಡೆಯುವುದಕ್ಕೆ ಏಕಕಾಲಕ್ಕೆ ಧಾವಿಸುವಂತಾಗಬಾರದು ಎಂದು ಖಾತೆಗಳ ಸಂಖ್ಯೆಗಳ ಕಡೆಯ ಅಂಕಿಯನ್ನು ಆಧಾರದ ಮೇಲೆ ದಿನಾಂಕಗಳನ್ನು ನಿಗದಿ ಮಾಡಿದ್ದು, ಖಾತೆದಾರರು ಅಂದರಂತೆ ಹಣವನ್ನು ಪಡೆದುಕೊಳ್ಳಬಹುದು.

Related posts

aravinda-avengers-wins-bz-cup-media-cricket-trophy

ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ

September 7, 2026
ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

September 7, 2026

0 ಅಥವಾ1 ಅಂಕೆಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್‌ 3ರಂದು, 2 ಅಥವಾ 3 ಅಂಕೆಯಿಂದ ಕೊನೆಗೊಳ್ಳುವ ಸಂಖ್ಯೆಯುಳ್ಳವರು ಏಪ್ರಿಲ್ 4ರಂದು, 4 ಅಥವಾ 5 ಅಂಕೆಯುಳ್ಳವರು ಏಪ್ರಿಲ್‌ 7ರಂದು, 6 ಅಥವಾ 7 ಅಂಕೆಯುಳ್ಳವರು ಏಪ್ರಿಲ್‌ 8ರಂದು ಹಾಗೂ 8 ಅಥವಾ 9 ಅಂಕೆಯುಳ್ಳ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್‌9ರಂದು ಹಣವನ್ನು ಪಡೆದುಕೊಳ್ಳಬಹುದು.9ನೇ ತಾರೀಖಿ ನಂತರ ಯಾವುದೇ ಬ್ಯಾಂಕ್‌ ಅವಧಿಯಲ್ಲಿ ಶಾಖೆಗಳಿಗೆ ಭೇಟಿ ನೀಡಿ ಹಣ ಪಡೆದುಕೊಳ್ಳಬಹುದು.

ಅಲ್ಲದೆ ಬ್ಯಾಂಕ್‌ಗಳಿಗೆ, ಖಾತೆದಾರರಿಗೆ ಅವರ ಖಾತೆ ಸಂಖ್ಯೆಗಳನ್ನು ಆಧರಿಸಿ, ಹಣ ಜಮೆಯಾಗಿರುವ ಮಾಹಿತಿ ನೀಡುವ ಜೊತೆಗೆ ಯಾವ ಶಾಖೆಗೆ ಭೇಟಿಯಾಗಬೇಕು ಎಂಬುದನ್ನು ತಿಳಿಸುವಂತೆ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಎಸ್ಸೆಮ್ಮೆಸ್‌ ಜೊತೆಗೆ ಸ್ಥಳೀಯವಾಗಿ ಪತ್ರಿಕೆಗಳು, ಕೇಬಲ್‌ ನೆಟ್‌ವರ್ಕ್‌, ಸ್ಥಳೀಯ ವಾಹಿನಿಗಳು, ರೇಡಿಯೋ ಇತ್ಯಾದಿ ಮಾಧ್ಯಮಗಳ ಮೂಲಕ ಪ್ರಚಾರ ನೀಡುವಂತೆ ತಿಳಿಸಲಾಗಿದೆ.

ಎಸ್‌ಎಲ್‌ಬಿಸಿ ಸಮನ್ವಯಕಾರರು ಕೂಡಲೇ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ, ಖಾತೆದಾರರು ಏಕಕಾಲಕ್ಕೆ ಬ್ಯಾಂಕ್‌ ಶಾಖೆಗಳಿಗೆ ಎಡತಾಕದಂತೆ ಎಚ್ಚರವಹಿಸಲು ಸೂಚಿಸಲಾಗಿದೆ. ರಾಜ್ಯ ಸರ್ಕಾರಗಳು ಸ್ಥಳೀಯವಾಗಿ ಜಿಲ್ಲಾಡಳಿತಗಳಿಗೆ ಅಗತ್ಯ ಸೂಚನೆಗಳನ್ನು ನೀಡಿ, ಪೊಲೀಸ್‌ ಬೆಂಬಲದೊಂದಿಗೆ ಫಲಾನುಭವಿಗಳಿಗೆ ಯಾವುದೇ ಅನುನುಕೂಲವಾಗದಂತೆ ಹಣ ವಿತರಣೆಯಾಗುವಂತೆ ನೋಡಿಕೊಳ್ಳುವಂತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಚಿಂದ್ರ ಮಿಶ್ರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags: Janadhan AccountPradhan Mantri Jan Dhan Yojana
ShareTweetSendShare
Join us on:

Related Posts

aravinda-avengers-wins-bz-cup-media-cricket-trophy

ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ

by admin
September 7, 2026
0

ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...

ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

by Shwetha
September 7, 2026
0

ಬಳ್ಳಾರಿ: ಕೆಪಿಎಸ್‌ಸಿ ಹುದ್ದೆ ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಶುರುವಾಗಿದೆ. ಈ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈವಾಡವಿದೆ...

ಅಹಿಂದ ಕಾಂಗ್ರೆಸ್ ನ ಸ್ವತ್ತು,ವಿಪಕ್ಷಗಳು ಯಾವ ಬಾಂಬ್ ಬೇಕಾದರೂ ಸಿಡಿಸಲಿ, ನಾನು ಆತುರದಲ್ಲಿಲ್ಲ: ಪ್ರಿಯಾಂಕ್ ಖರ್ಗೆ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್

ಅಹಿಂದ ಕಾಂಗ್ರೆಸ್ ನ ಸ್ವತ್ತು,ವಿಪಕ್ಷಗಳು ಯಾವ ಬಾಂಬ್ ಬೇಕಾದರೂ ಸಿಡಿಸಲಿ, ನಾನು ಆತುರದಲ್ಲಿಲ್ಲ: ಪ್ರಿಯಾಂಕ್ ಖರ್ಗೆ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್

by Shwetha
September 7, 2026
0

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಬ್ಬರದ ತಿರುಗೇಟು ನೀಡಿದ್ದಾರೆ. ವಿಪಕ್ಷಗಳು...

ಹೆಲಿಕಾಪ್ಟರ್ ನಲ್ಲಿ ಓಡಾಡುವವರು ಪ್ರಜಾಸೇವಕರಾಗಲು ಸಾಧ್ಯವೇ?ಬಡವರ ಹೊಟ್ಟೆಯ ಮೇಲೆ ಹೊಡೆಯುವ ಸರ್ಕಾರಕ್ಕೆ ಮನುಷ್ಯತ್ವ ಇದೆಯೇ?:ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ

ಹೆಲಿಕಾಪ್ಟರ್ ನಲ್ಲಿ ಓಡಾಡುವವರು ಪ್ರಜಾಸೇವಕರಾಗಲು ಸಾಧ್ಯವೇ?ಬಡವರ ಹೊಟ್ಟೆಯ ಮೇಲೆ ಹೊಡೆಯುವ ಸರ್ಕಾರಕ್ಕೆ ಮನುಷ್ಯತ್ವ ಇದೆಯೇ?:ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ

by Shwetha
September 7, 2026
0

ಗಂಗಾವತಿ: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಮುಖ್ಯಮಂತ್ರಿಗಳ ನಡವಳಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿ ಚಲೋ...

ನಗರ ಗಬ್ಬೆದ್ದು ನಾರುತ್ತಿದ್ದರೂ ಖಾಯಂ ಉದ್ಯೋಗ ಬೇಕೆ? ಕೆಲಸಕ್ಕೆ ಬಾರದವರಿಗೆ ಸರ್ಕಾರಿ ಭಾಗ್ಯವೇಕೆ? :ಪೌರಕಾರ್ಮಿಕರ ಬೇಡಿಕೆಗೆ ಸಚಿವ ಕೃಷ್ಣಬೈರೇಗೌಡ ಬ್ರೇಕ್-ಸಚಿವರ ಆಕ್ರೋಶಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ ಬೆಂಬಲ

ನಗರ ಗಬ್ಬೆದ್ದು ನಾರುತ್ತಿದ್ದರೂ ಖಾಯಂ ಉದ್ಯೋಗ ಬೇಕೆ? ಕೆಲಸಕ್ಕೆ ಬಾರದವರಿಗೆ ಸರ್ಕಾರಿ ಭಾಗ್ಯವೇಕೆ? :ಪೌರಕಾರ್ಮಿಕರ ಬೇಡಿಕೆಗೆ ಸಚಿವ ಕೃಷ್ಣಬೈರೇಗೌಡ ಬ್ರೇಕ್-ಸಚಿವರ ಆಕ್ರೋಶಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ ಬೆಂಬಲ

by Shwetha
September 7, 2026
0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸ್ವಚ್ಛತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನೀಡಿದ್ದ ಖಡಕ್ ಹೇಳಿಕೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram