ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ಭರ್ಜರಿಯಾಗಿಯೇ ಕೋಟಿ ಕೋಟಿ ಹೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಕಾಮಗಾರಿಗಳು ನಿರೀಕ್ಷಿತ ಮಟ್ಟದ ವೇಗದಲ್ಲಿ ನಡೆಯುತ್ತಿಲ್ಲ. ಮಂಗಳೂರು ನಗರದ ತುಂಬೆಲ್ಲಾ ಅರೆಬರೆ ಕಾಮಗಾರಿಗಳಿಂದಾಗಿ ಹಳ್ಳಿ-ಗುಂಡಿಗಳಲ್ಲಿ ವಾಹನಗಳು ಕುಲುಕುತ್ತಾ ಹರಸಾಹಸ ನಡೆಸುತ್ತಿವೆ. ಕೆಲವು ಕಡೆ ಕಾಮಾಗಾರಿ ನಡೆಸುತ್ತಿರುವ ಗುತ್ತಿಗೆದಾರರು ರಸ್ತೆಗಳಿಗೆ ಬ್ಯಾರಿಕೇಡ್‍ಗಳನ್ನೂ ಅಳವಡಿಸದೆ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಮೃತ್ಯಕೂಪವನ್ನಾಡಿ ಮಾಡಿದ್ದಾರೆ.

ಇದನ್ನೂ ನೋಡಿ ಮನಸು ತಡೆಯಲಾಗದೇ ಮಂಗಳೂರು ವೆಸ್ಟ್ ಸಂಚಾರಿ ಪೇದೆ ಸಂಪತ್, ಸುಗಮ ಸಂಚಾರಕ್ಕೆ ಹೊಂಡ-ಗುಂಡಿಗಳಿದ್ದ ಕಡೆ ಬ್ಯಾರಿಕೇಡ್ ಅಳವಡಿಸಿ ಸಮಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಪೇದೆ ಸಂಪತ್‍ರ ಜನಪರ ಕಾಳಜಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೂ ಪಾತ್ರವಾಗಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.

ಕೊರೊನಾ ನಂತರ ರಸ್ತೆಯಲ್ಲಿ ಸಂಚಾರಿ ಪೋಲಿಸರು ಇರೋದೆ ಅಪರೂಪವಾಗಿತ್ತು. ಈಗ ಮಾಸ್ಕ್ ದಂಡದ ನೆಪದಲ್ಲಿ ಸಂಚಾರಿ ಪೋಲಿಸರು ಜನರಿಂದ ವಸೂಲಿಗೆ ಇಳಿದ್ದಾರೆ ಎಂಬ ಆರೋಪಗಳು ಎಲ್ಲಾ ನಗರಗಳಲ್ಲು ಸರ್ವೇ ಸಾಮಾನ್ಯವಾಗಿದೆ. ಇಂತಹದರಲ್ಲಿ ಪೇದೆ ಸಂಪತ್‍ರ ವಿಭಿನ್ನವಾಗಿ ನಿಂತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








