ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ಪಡೆಗಳ ನಡುವೆ ಘರ್ಷಣೆ !
ಸಿಕ್ಕಿಂ, ಜನವರಿ25: ಪೂರ್ವ ಲಡಾಕ್‌ನಲ್ಲಿ ನಡೆಯುತ್ತಿರುವ ಗಡಿ ವಿವಾದದ ಮಧ್ಯೆ, ಉತ್ತರ ಸಿಕ್ಕಿಂ ಗಡಿ ಪ್ರದೇಶದ ನಾಥು ಲಾದಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ ಎಂದು ಸೋಮವಾರ ವರದಿಯಾಗಿದೆ.

ಸೈನಿಕರ ನಡುವೆ ಘರ್ಷಣೆ ಮೂರು ದಿನಗಳ ಹಿಂದೆ ನಡೆದಿತ್ತು. ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿದೆ ಎಂದು ಭಾರತೀಯ ಮಿಲಿಟರಿ ಅಧಿಕಾರಿಗಳು ಉಲ್ಲೇಖಿಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
2021- ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಸೇರಿ 32 ಬಾಲಪ್ರತಿಭೆಗಳ ಆಯ್ಕೆ
ಚೀನಾದ ಸೈನಿಕರು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದು, ಈ ವೇಳೆ ಪ್ರತಿರೋಧ ತೋರಿದ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಸಹ ಪ್ರತಿದಾಳಿ ನಡೆಸಿದ್ದು, ಚೀನಾದ 20 ಸೈನಿಕರಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ದೊರಕಿದೆ. ಮೂವರು ಭಾರತೀಯ ಯೋಧರು ಸಹ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ, ಭಾರತ ಮತ್ತು ಚೀನಾ ನಡುವಿನ ಒಂಬತ್ತನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಇಂದು ಮುಂಜಾನೆ 2: 30 ಕ್ಕೆ ಕೊನೆಗೊಂಡಿತು. ಈ ಸಭೆಯು ಭಾನುವಾರ ಬೆಳಿಗ್ಗೆ 11 ಗಂಟೆಗೆ ಪೂರ್ವ ಲಡಾಖ್ ಸೆಕ್ಟರ್‌ನ ಚುಶುಲ್ ಎದುರಿನ ಮೊಲ್ಡೊದಲ್ಲಿ ಪ್ರಾರಂಭವಾದ ಮಾತುಕತೆ 15 ಗಂಟೆಗಳಿಗಿಂತ ಹೆಚ್ಚು ಸಮಯ ನಡೆಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಪರಿಣಾಮಕಾರಿ ಮನೆಮದ್ದುhttps://t.co/E7TdVhTNR3
— Saaksha TV (@SaakshaTv) January 22, 2021
ಡೆಬಿಟ್ ಕಾರ್ಡ್ ಬಳಸುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳುhttps://t.co/f90oDIx0lm
— Saaksha TV (@SaakshaTv) January 22, 2021








