ಅಮೆರಿಕ – ಮೆಕ್ಸಿಕೋ ಗಡಿ ಟೆಕ್ಸಾನ್ ನಲ್ಲಿ ಸುಟ್ಟ ಕರಕಲಾದ 19 ಮೃತದೇಹಗಳು ಪತ್ತೆ…!
ಅಮೆರಿಕ – ಮೆಕ್ಸಿಕೋ ಗಡಿಭಾಗದಲ್ಲಿನ ಟೆಕ್ಸಾಸ್ ನ ರಿಯೋ ಗ್ರಾಂಡೆ ಪಟ್ಟಣದ ಬಳಿಯಲ್ಲಿ ಸುಟ್ಟು ಕರಕಲಾದ 19 ಮಂದಿಯ ಮೃತದೇಹ ಪತ್ತೆಯಾಗಿದೆ. ಕ್ಯಾಮಾರ್ಗೋ ಹೊರಗಿನ ಕಚ್ಚಾ ರಸ್ತೆಯಲ್ಲಿ ಶವಗಳನ್ನ ಪತ್ತೆ ಮಾಡಲಾಗಿದೆ ಎಂದು ತಮೌಲಿಪಾಸ್ ಸ್ಟೇಟ್ ಪ್ರಾಸಿಕ್ಯೂಟರ್ ಕಚೇರಿ ಮಾಹಿತಿ ನೀಡಿದೆ.
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ
ಈ ರಸ್ತೆಯಲ್ಲಿ ಎರಡು ವಾಹನಗಳಲ್ಲಿ ಬೆಂಕಿ ಹತ್ತಿ ಉರಿಯುತ್ತಿತ್ತು. ಒಂದು ಗಾಡಿಯಲ್ಲಿ ನಾಲ್ಕು ಮೃತದೇಹಗಳು ಸಿಕ್ಕಿದ್ರೆ ಇನ್ನೊಂದು ವಾಹನದಲ್ಲಿ 15 ಮಂದಿಯ ಮೃತದೇಹ ಪತ್ತೆಯಾಗಿದೆ. ಮೃತರಾದವರನ್ನೆಲ್ಲ ಬೇರೆ ಎಲ್ಲೋ ಕೊಂದು ಇಲ್ಲಿ ಸುಡಲಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಘಟನೆ ಶುಕ್ರವಾರದಂದೇ ನಡೆದಿದ್ದು ಜನ ಅದನ್ನ ಬಹಿರಂಗ ಮಾಡಲು ಹೆದರಿದ್ದರು ಎಂದು ಹೇಳಿದ್ದಾರೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಹಿಂಸಾತ್ಮಕ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಈ ಘಟನೆ ಜನರನ್ನ ಬೆಚ್ಚಿ ಬೀಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








