ತಂಗಿಯ ಮೇಲೆ ಕಣ್ಣು ಹಾಕಿದವನಿಗೆ ಅಪ್ರಾಪ್ತ ವಯಸ್ಸಿನ ಅಣ್ಣ ಮಾಡಿದ್ದೇನು ನೋಡಿ..!
ಮಹಾರಾಷ್ಟç : 15 ವರ್ಷದ ಅಪ್ರಾಪ್ತ ಬಾಲಕನೋರ್ವ ಸ್ನೇಹಿತನ ಜೊತೆಗೂಡಿ 20 ವರ್ಷದ ಯುವಕನ ಕೊಲೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ
ನಡೆದಿದೆ. ಸಂತ್ರಸ್ತ ಹಾಗೂ ಆರೋಪಿಯ ನಡುವೆ ಈ ಮೊದಲೇ ಜಗಳವಾಗಿತ್ತು. ಆದರೆ ಸಂತ್ರಸ್ತ ಇತ್ತೀಚೆಗೆ ಆರೋಪಿಯ ತಂಗಿಯ ಮೇಲೆ ಕಣ್ಣು ಹಾಕಿದ್ದ ಎಂದು ಆರೋಪಿಸಿ ಆತನನ್ನು ಚಾಕುವಿನಿಂದ ಇರಿಯಲಾಗಿದೆ. ಸಂತ್ರಸ್ತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಸಂತ್ರಸ್ತನ ತಾಯಿ ಪೊಲೀಸರಿಗೆ ದೂರು ನಿಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ರಿಮಾಂಡ್ ಹೋಮ್ ಗೆ ಕಳುಹಿಸಿದ್ದಾರೆ. ಇತ್ತೀಚೆಗೆ ಬಾಲಾಪರಾಧಗಳು ಹೆಚ್ಚುತ್ತಲೇ ಇದ್ದು, ಇದಕ್ಕೆ ಮಕ್ಕಳು ಬೆಳೆಯುತ್ತಿರುವ ವಾತಾವರಣ, ಅವರಿರುವ ಪರಿಸರ, ಅವರು ಸೇರುವ ಸಂಘ ಇದೆಲ್ಲದರ ಪರಿಣಾಮವೂ ಆಗಬಹುದು. ಆದ್ರೆ ಪೋಷಕರು ಮಕ್ಕಳ ಚಲನ ವಲನಗಳ ಬಗ್ಗೆ ಸೂಕ್ಷö್ಮವಾಗಿ ಗಮನೆ ಇಡಬೇಕು.
ಹಲವು ಕಷ್ಟಗಳ ನಿವಾರಣೆಗೆ ಈ ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವಂತೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








