ವಿದೇಶಿ ನೆಲದ ಆಕಾಶದೆತ್ತರದಲ್ಲಿ ರಾರಾಜಿಸಿದ ಭಾರತದ ರಾಷ್ಟ್ರ ಧ್ವಜ..!
ಚೀನಾ ಮತ್ತು ಸಿಂಗಾಪುರದ ಅನಿವಾಸಿ ಭಾರತೀಯರು ಇಂದು 72 ನೇ ಗಣರಾಜ್ಯೋತ್ಸವವನ್ನು ಸರ್ಕಾರದ ಕೋವಿಡ್ ನಿರ್ಬಂಧಗಳೊಂದಿಗೆ ಆಚರಿಸಿದ್ಧಾರೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ ‘ರಾಜರುಮಾಲು’ ಧರಿಸಿದ ಪ್ರಧಾನಿ ಮೋದಿ..!
ಸಿಂಗಾಪುರದಲ್ಲಿ ಕೋವಿಡ್ 19 ಸುರಕ್ಷತಾ ಕ್ರಮಗಳಿಂದಾಗಿ ಸಮಾರಂಭವನ್ನು ಹೈಕಮಿಷನ್ ನ ಸದಸ್ಯರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಭಾರತದ ಹೈಕಮಿಷನರ್ ಪಿ.ಕುಮಾರನ್ ಅವರು ರಾಷ್ಟ್ರದ ಧ್ವಜಾರೋಹಣ ನೆರವೇರಿಸಿದ್ರು.
ಬೆಂಗಳೂರಿನಲ್ಲೂ ಜೋರಾದ ಅನ್ನದಾತರ ಹೋರಾಟ: ಟ್ರ್ಯಾಕ್ಟರ್ ಏರಿ ಬಂದ ರೈತರು
ಇತ್ತ ಚೀನಾದ ಬೀಜಿಂಗ್‌ನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಿಷನ್ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಲಾಗಿತ್ತು. ರಾಯಭಾರಿ ವಿಕ್ರಮ್ ಮಿಸ್ರಿ ಅವರು ಭಾರತೀಯ ರಾಯಭಾರ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದರು.
ರಣಾಂಗಣವಾದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ..!
ಚೈತಿ ಆರ್ಟ್ಸ್ ಫೌಂಡೇಶನ್ ನಿರ್ಮಿಸಿದ ‘ವಂದೇ ಮಾತರಂ’ ನ ವಿಶೇಷ ವಾದ್ಯ ಸಂಗೀತದಿಂದ ಸಂಯೋಜಿಸಲಾದ ಗೀತೆಯನ್ನು ಬಿಡುಗಡೆಗೊಳಿಸಿ, ಮಿಸ್ರಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭಾಷಣವನ್ನು ಓದಿದರು.
ದೆಹಲಿ : ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಪಲ್ಟಿ : ಓರ್ವ ಸಾವು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel