ಛತ್ತೀಸಗಡದಲ್ಲಿ 12 ಮಹಿಳೆಯರು ಸೇರಿ 24 ಮಂದಿ ನಕ್ಸಲರು ಶರಣು
ಛತ್ತೀಸಗಡ: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ 24 ಮಂದಿ ನಕ್ಸಲರು ಶರಣಾಗಿದ್ದಾರೆ. ಇವರಲ್ಲಿ 12 ಮಹಿಳೆಯರು ಸೇರಿದ್ದಾರೆ. ದಕ್ಷಿಣ ಬಸ್ತಾರ್ ಪ್ರಾಂತ್ಯದಲ್ಲಿ ಚುರುಕಾಗಿದ್ದ ನಕ್ಸಲರು ಗಣರಾಜ್ಯೋತ್ಸವದ ದಿನದಂದು ಪೊಲೀಸರಿಗೆ ಶರಣಾಗಿದ್ದಾರೆ. ಇದರಲ್ಲಿ ಮೂವರ ಪತ್ತೆಗೆ ಸರ್ಕಾರವು 1 ಲಕ್ಷ ರೂ ನಗದು ಪುರಸ್ಕಾರ ಘೋಷಿಸಿತ್ತು.
ಇನ್ನೂ ತಾವು ಮಾವೋವಾದಿಗಳ ತತ್ವಗಳಿಂದ ಬೇಸರಗೊಂಡು ಶರಣಾಗಿದ್ದೇವೆ. ಅಲ್ಲದೆ ‘ಲೋನ್ ವರೋತ್ತು’ (ಮರಳಿ ಮನೆಗೆ) ಅಭಿಯಾನವು ನಮ್ಮನ್ನು ಹಿಂಸೆಯನ್ನು ತೊರೆಯುವಂತೆ ಪ್ರೇರಿಪಿಸಿದೆ ಎಂದು ನಕ್ಸಲರು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಅವರಿಗೆ ತಲಾ 10,000 ರೂ. ನೆರವು ನೀಡಲಾಗಿದೆ. ಬಳಿಕ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಹೆಚ್ಚಿನ ನೆರವು ದೊರೆಯುತ್ತದೆ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು. ಇನ್ನೂ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಲಾದ ಅಭಿಯಾನದಡಿ ಈವರೆಗೆ ದಾಂತೇವಾಡ ಜಿಲ್ಲೆಯೊಂದರಲ್ಲೇ ಸುಮಾರು 272 ನಕ್ಸಲರು ಶರಣಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel