ಗಡಿ ವಿಚಾರದಲ್ಲಿ ಮತ್ತೆ ಖ್ಯಾತೆ: 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರಗಳ ಬಿಡುಗಡೆ ‘ಉದ್ಧ’ಟ’ವ್ ಠಾಕ್ರೆ ಸರ್ಕಾರ..!
ಮುಂಬೈ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಕನ್ನಡಿಗರ ತಾಳ್ಮೆ ಪರೀಕ್ಷಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮುಂದುವರೆದ ರೈತರ ಹೋರಾಟ : ಪೊಲೀಸರ ಭಿಗಿ ಭದ್ರತೆ
ಎ ಕೇಸ್ ಫಾರ್ ಜಸ್ಟೀಸ್ ಎಂಬ ಹೆಸರಿನ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿರುವ ಮಹಾ ಸರ್ಕಾರ ಈ ಮೂಲಕ ಬೆಳಗಾವಿ, ಕಾರವಾರ, ಬೀದರ್ ಭಾಗಗಳು ಮರಾಠಿ ಭಾಷಿಕರದ್ದಾಗಿದ್ದು, ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಸಾಬೀತು ಮಾಡಲಲು ಹೊರಟಿದೆ.
ಹೌದು ಮಹಾರಾಷ್ಟ್ರ ಸರ್ಕಾರವೇ ತಯಾರಿಸಿರುವ ಈ ಸಾಕ್ಷ್ಯಚಿತ್ರದಲ್ಲಿ ಕಾರವಾರದ ಗ್ರಾಮವೊಂದರಲ್ಲಿ ಇಂಗ್ಲೀಷ್, ಕೊಂಕಣಿ, ಮರಾಠಿ ಭಾಷೆಯ ಬೋಧನೆ ಚಿತ್ರಣ, ಎನ್ ಸಿಸಿ ಬಟಾಲಿಯನ್ ನಲ್ಲಿ ಮರಾಠಿ ಬೋರ್ಡ್, ಮರಾಠಿ ಪತ್ರಿಕೆಯಲ್ಲಿ 1912ರಲ್ಲಿ ಕಾರವಾರ ಸಹಕಾರಿ ಬ್ಯಾಂಕ್ ನ ಸುದ್ದಿ ಪ್ರಸಾರ, ಬೆಳಗಾವಿಯಲ್ಲಿ 1890 ರಲ್ಲಿ ನಿರ್ಮಾಣವಾದ ಸೇತುವೆ ಮೇಲೆ ಮರಾಠಿ ನಾಮಫಲಕ ಇರುವ ದೃಶ್ಯ ಸೇರಿದಂತೆ ಹಲವು ಅಂಶಗಳು ಸಾಕ್ಷ್ಯಚಿತ್ರದಲ್ಲಿದೆ.
‘ಸಲಾರ್’ ಕಾರಣಕ್ಕೆ ‘KGF 2’ ತೆಲುಗು ಡಬ್ಬಿಂಗ್ ರೈಟ್ಸ್ ‘ಡಬಲ್’ ರೇಟ್ ಗೆ ಮಾರಾಟ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








