ಕೊರೊನಾ ಭೀತಿಯ ನಡುವೆ ರಾಜ್ಯದ ಕೆಲವು ಕಡೆ ಭೂಕಂಪನದ ಅನುಭವವಾಗಿದೆ. ಇದರಿಂದ ಜನರು ಆತಂಕಗೊಂಡಿದ್ದು, ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುತ್ತಿಗೆ, ಹನೆಮಾರನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದ್ದಕ್ಕಿದ್ದಂತೆ ಭೂಕಂಪನದ ಅನುಭವವಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಭೂಮಿ ಕಂಪಿಸಿದ ತಕ್ಷಣ ಗ್ರಾಮಸ್ಥರಿಗೆ ಏನಾಗ್ತಿದೆ ಅನ್ನೋದು ಗೊತ್ತಾಗದೇ, ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇನ್ನು, ಮೈಸೂರು ಭಾಗದಲ್ಲೂ ಕೆಲಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಭೇರ್ಯ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದ್ದು, ಮಂಜನಹಳ್ಳಿ ಗ್ರಾಮದಲ್ಲಿ ಪಾತ್ರೆಗಳು, ಮನೆಯ ಹೆಂಚುಗಳು ನೆಲಕ್ಕೆ ಬಿದ್ದಿವೆ.








