ವಾಟ್ಸಾಪ್ ಬಳಿಕ ಫೇಸ್ ಬುಕ್ ನಲ್ಲಿ ಬದಲಾವಣೆಗಳು : ಹಾರ್ಮ್ ಫುಲ್ ಕಂಟೆಂಟ್ ಗಳ ನಿಯಂತ್ರಣಕ್ಕೆ ತಂತ್ರ..!
ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ ಬುಕ್ ಇದೀಗ ವಾಟ್ಸಾಪ್ ಮಾದರಿಯಲ್ಲೇ ಕೆಲ ಬದಲಾವಣೆಗಳನ್ನ ತರಲು ಮುಂದಾಗಿದೆ. ಆದ್ರೆ ಬಳಕೆದಾರರ ಪ್ರೈವೆಸಿ ನೀತಿಯಲ್ಲಿ ಬದಲಾವಣೆಗಳಾಗೋದಿಲ್ಲ. ಬದಲಾಗಿ ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಭಾಯಿಸಲು ಜಾಹೀರಾತುದಾರರಿಗೆ ಟಾಪಿಕ್ ಎಕ್ಲೂಶನ್ ಕಂಟ್ರೋಲ್ಸ್ ‘(ವಿಷಯ ಹೊರಗಿಡುವ ನಿಯಂತ್ರಣಗಳನ್ನು) ಅಭಿವೃದ್ಧಿಪಡಿಸಲು ಫೇಸ್ ಬುಕ್ ಮುಂದಾಗಿದೆ.
ಸಿನಿಪ್ರಿಯರಿಗೆ ಗುಡ್ ನ್ಯೂಸ್ : ಥಿಯೇಟರ್ ಗಳಲ್ಲಿ 100% ಸೀಟಿಂಗ್ : ಯಾವಾಗಿಂದ ಗೊತ್ತಾ..!
ಫೇಸ್ ಬುಕ್ ಈಗಾಗಲೇ ತನ್ನ ಫ್ಲಾಟ್ ಫಾರ್ಮ್‌ನಲ್ಲಿ “ವಿಷಯ ಹೊರಗಿಡುವ ನಿಯಂತ್ರಣಗಳನ್ನು” ಅಭಿವೃದ್ಧಿಪಡಿಸಲು ಪ್ರಾರಂಭಿಸಲಿದೆ, ಜಾಹೀರಾತುದಾರರು ತಮ್ಮ ಜಾಹೀರಾತುಗಳ ಜೊತೆಗೆ ಹಾರ್ಮ್ ಫುಲ್ ಕಂಟೆಂಟ್ ಗಳು ಕಾಣಿಸಿಕೊಳ್ಳದಂತೆ ಅವುಗಳನ್ನು ತೆಗೆದು ಹಾಕುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ. ಫೇಸ್ ಬುಕ್ ನ್ಯೂಸ್ ಫೀಡ್ ನಲ್ಲಿ ತಮ್ಮ ಜಾಹೀರಾತುಗಳು ಹೇಗೆ ತೋರಿಸುತ್ತವೆ ಎಂಬುದನ್ನು ವ್ಯಾಖ್ಯಾನಿಸಲು ನಿಯಂತ್ರಣಗಳು ಸಹಾಯ ಮಾಡುತ್ತವೆ ಎಂದು ಬ್ಲಾಗ್ ಪೋಸ್ಟ್ ನಲ್ಲಿ ಫೇಸ್ ಬುಕ್ ತಿಳಿಸಿತ್ತು . ಇದು ಒಂದು ಸಣ್ಣ ಗುಂಪಿನ ಜಾಹೀರಾತುದಾರರೊಂದಿಗೆ ನಿಯಂತ್ರಣಗಳನ್ನು ಟೆಸ್ಟಿಂಗ್ ಪ್ರಾರಂಭಿಸುತ್ತದೆ, ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು ಎಂದು ಫೇಸ್ ಬುಕ್ ಹೇಳಿಕೊಂಡಿದೆ.
ಬುರ್ಜ್ ಖಲೀಫಾದಲ್ಲಿ ‘ಕಿಚ್ಚ’ನ ವಿಕ್ರಾಂತ್ ರೋಣ ಅವತಾರ ರಿವೀಲ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







