ಸಿನಿಪ್ರಿಯರಿಗೆ ಗುಡ್ ನ್ಯೂಸ್ : ಥಿಯೇಟರ್ ಗಳಲ್ಲಿ 100% ಸೀಟಿಂಗ್ : ಯಾವಾಗಿಂದ ಗೊತ್ತಾ..!
ನವದೆಹಲಿ: ಫೆಬ್ರವರಿ 1ರಿಂದ ಚಿತ್ರ ಮಂದಿರಗಳಲ್ಲಿ ಪೂರ್ಣ ಸೀಟು ಭರ್ತಿ ಮಾಡಲು ಅವಕಾಶ ನೀಡಿರುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಚಿತ್ರ ಪ್ರದರ್ಶನ, ಚಿತ್ರ ಮಂದಿರ ನಿರ್ವಹಣೆಗೆ ಸಂಬಂಧಿಸಿದಂತೆ ಪರಿಷ್ಕರಿಸಿದ SOP ಅನ್ನು ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಾವೇಡ್ಕರ್ ಅವರು ಇದು ಸಿನಿಮಾ ಪ್ರಿಯರಿಗೆ ನೆಚ್ಚಿನ ಸುದ್ದಿಯಾಗಿದೆ ಎಂದಿದ್ದಾರೆ. ಈ ಮಾಹಿತಿ ಅನ್ವಯ ಸಿನಿಮಾ ಥೇಟರ್ ಗಳಲ್ಲಿ ಶೇ 100ರಷ್ಟು ಸೀಟುಗಳನ್ನು ಭರ್ತಿ ಮಾಡಬಹುದಾಗಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಕೋವಿಡ್-19 ನಿಯಮಗಳನ್ನು ಕಡ್ಡಾಯ ಅನುಸರಿಸಬೇಕು ಎಂದಿದ್ದಾರೆ.
ನಬಾರ್ಡ್ ಸಹಾಯಧನದ ಜೊತೆಗೆ 1.8 ಲಕ್ಷ ಬಂಡವಾಳ ಹೂಡಿ ವ್ಯಾಪಾರ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಿ
ಒಟ್ಟಾರೆ ಕೊರೊನಾ ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್ ಡೌನ್ ವೇಳೆ ಸುಮಾರು 6-7 ತಿಂಗಳುಗಳ ಕಾಲ ಬಂದ್ ಆಗಿದ್ದ ಸಿನಿಮಾ ಥಿಯೇಟರ್ ಗಳ ಪುನರಾರಂಭಕ್ಕೆ ಅಕ್ಟೋಬರ್ 15 ರಿಂದ ಅವಕಾಶ ನೀಡಲಾಗಿತ್ತು. ಆದ್ರೆ ಪೂರ್ಣ ಪ್ರಮಾಣದ ಸೀಟಿಂಗ್ ವ್ಯವಸ್ಥೆಗೆ ಅನುಮತಿ ವಿಧಿಸಿರಲಿಲ್ಲ. ಶೇ 50 ರಷ್ಟು ಸೀಟಿಂಗ್ ಗೆ ಮಾತ್ರ ಅನುಮತಿ ನೀಡಲಾಗಿತ್ತು. ಇದ್ರಿಂದಾಗಿ ಯಾವುದೇ ಸ್ಟಾರ್ ನಟರ ಸಿನಿಮಾಗಳು, ಹೊಸ ಸಿನಿಮಾಗಳನ್ನ ರಿಲೀಸ್ ಮಾಡಲು ಮೇಕರ್ಸ್ ಹಿಂದೇಟು ಹಾಕ್ತಾಯಿದ್ರು. ಅಲ್ದೇ ಇದ್ರಿಂದಾಗಿ ಸಿನಿಮಾ ಮಾಲೀಕರಿಗೆ ನಷ್ಟ ಉಂಟಾಗುತ್ತಿತ್ತು. ಇದೀಗ ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಕೇಂದ್ರ ಬಜೆಟ್ 2021 : ಕರ್ನಾಟಕದ ಬೇಡಿಕೆಗಳೇನು..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel