ಮೈಸೂರು: ಕತ್ತಲಲ್ಲಿ ದೀಪ ಹಚ್ಚಿದ್ರೆ ಕೊರೊನಾ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತೆ ಎಂದು ಬಿಜೆಪಿ ಶಾಸಕ ರಾಮದಾಸ್ ಹೇಳಿದ್ದಾರೆ. ಮೈಸೂರಿನ ಎಂಜಿ ಮಾರುಕಟ್ಟೆಯಲ್ಲಿ ಶಾಸಕರು ಕ್ಯಾಂಡಲ್, ಮಾಸ್ಕ್ ಹಾಗೂ ದೀಪ ವಿತರಣೆ ಮಾಡುತ್ತಿದ್ದ ವೇಳೆಯಲ್ಲಿ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕತ್ತಲಿನಲ್ಲಿ ದೀಪ ಹಚ್ಚಿದರೆ ಎಲ್ಲೆ ಇದ್ದರೂ ವೈರಸ್ ದೀಪದ ಬಳಿ ಬರುತ್ತೆ. ಆಗ ದೀಪದ ಶಾಖಕ್ಕೆ ವೈರಸ್ ಸಾವನ್ನ ಕಾಣುತ್ತೆ. ಈ ಕಾರಣಕ್ಕೆ ಪ್ರಧಾನಿ ಮೋದಿಯವರು ದೀಪ ಹಚ್ಚಲು ದೇಶಾದ್ಯಾಂತ ಕರೆ ನೀಡಿದ್ದಾರೆ ಎಂದರು..
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...








