ರಾಜ್ಯಸಭೆಯಲ್ಲಿ ಕೃಷಿ ಕಾನೂನುಗಳ ಚರ್ಚೆಗಿಲ್ಲ ಅವಕಾಶ: ವಿಪಕ್ಷಗಳಿಂದ ಸಭಾತ್ಯಾಗ
ನವದೆಹಲಿ : 267ರ ನಿಯಮದ ಪ್ರಕಾರ ಇಂದಿನ ಕಲಾಪ ರದ್ದುಪಡಿಸಿ, ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆ ಸಂಬಂಧ ಚರ್ಚಿಸುವಂತೆ ವಿಪಕ್ಷಗಳು ನೋಟಿಸ್ ನೀಡಿದ್ದವು. ಇದಕ್ಕೆ ಅವಕಾಶ ಸಿಗದ ಹಿನ್ನೆಲೆ ವಿಪಕ್ಷಗಳು ಸಭಾತ್ಯಾಗ ಮಾಡಿವೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಇಂದಿನ ಎಲ್ಲಾ ಚರ್ಚೆಗಳನ್ನು ರದ್ದುಪಡಿಸಿ, ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ರಾಜ್ಯಸಭೆಯಲ್ಲಿ ಸಭಾಧ್ಯಕ್ಷರಿಗೆ ಒತ್ತಾಯಿಸಿದವು.
ಇದಕ್ಕೆ ಸಭಾಧ್ಯಕ್ಷರಾದ ವೆಂಕಯ್ಯನಾಯ್ಡು ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಸದನದಲ್ಲಿ ಗದ್ದಲ ಶುರುವಾಯ್ತು. ವಿಪಕ್ಷಗಳು ಚರ್ಚೆಗೆ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದು ಕೂತರು.
ಆದ್ರೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಕೃಷಿ ಕಾನೂನುಗಳ ಚರ್ಚೆಗೆ ಅವಕಾಶ ಕೊಡದ ಹಿನ್ನೆಲೆ ಹಾಗಾಗಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸಂಸದರು ಸಭಾತ್ಯಾಗ ಮಾಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









