ಯಲಹಂಕ ಏರ್ ಶೋ : ಲೋಹ ಹಕ್ಕಿಗಳ ತಾಲೀಮು
ಬೆಂಗಳೂರು : ಫೆಬ್ರವರಿ ಮೂರರಿಂದ ನಗರದ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರ್ ಶೋ ನಡೆಯಲಿದೆ.
ಈ ಹಿನ್ನೆಲೆ ಇಂದು ಲೋಹದ ಹಕ್ಕಿಗಲು ಭರ್ಜರಿ ತಾಲೀಮು ನಡೆಸುತ್ತಿವೆ.
ಫೆಬ್ರವರಿ 3ರಿಂದ 7ರವರೆಗೆ ಐದು ದಿನಗಳ ಕಾಲ ಏರ್ ಶೋ ನಡೆಯಲಿದ್ದು, ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ವೈಮಾನಿಕ ಪ್ರದರ್ಶನವಾಗಲಿದೆ.
ಇದಲ್ಲದೆ ಇದೇ ಮೊದಲ ಬಾರಿಗೆ ಸೂರ್ಯ ಕಿರಣ್ ಹಾಗೂ ಸಾರಂಗ್ ವೈಮಾನಿಕ ಪ್ರದರ್ಶನ ತಂಡಗಳು ಜಂಟಿ ಪ್ರದರ್ಶನ ನೀಡಲಿವೆ.
ಇವುಗಳ ಜೊತೆಗೆ ‘ಚಿನೂಕ್ ಟ್ವಿನ್ ಎಂಜಿನ್’ ಹೆಲಿಕಾಪ್ಟರ್ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.
ಇನ್ನು 13ನೇ ಆವೃತ್ತಿಯ ಏರ್ ಇಂಡಿಯಾ ಶೋ ಪ್ರತ್ಯಕ್ಷ ಹಾಗೂ ವರ್ಚುಯಲ್ ಎರಡೂ ಮಾದರಿಯಲ್ಲಿ ನಡೆಯಲಿದೆ.
ಭಾರತ ಸೇರಿದಂತೆ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿದೆ. ಒಟ್ಟು 42 ವಿಮಾನಗಳು ದಿನದಲ್ಲಿ 7 ಬಾರಿ ಹಾರಾಟ ನಡೆಸಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









