ATMನಲ್ಲಿ ಮಹಿಳೆಯ ಮೇಲೆ ಹಲ್ಲೆ : ಆರೋಪಿಗೆ 12 ವರ್ಷ ಜೈಲು..!
ಬೆಂಗಳೂರು : ಕಾರ್ಪೋರೇಷನ್ ಸರ್ಕಲ್ ನಲ್ಲಿನ ಕಾರ್ಪೋರೇಷನ್ ಎಟಿಎಂನಲ್ಲಿ ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಹಣ ದರೋಡೆ ಮಾಡಲಾಗಿದ್ದ ಪ್ರಕರಣ ಸಿಲಿಕಾನ್ ಸಿಟಿ ಮಂದಿಯನ್ನ ಬೆಚ್ಚಿ ಬೀಳಿಸಿತ್ತು. 2013 ನವೆಂಬರ್ 19 ರಂದು ನಡೆದಿದ್ದ ಈ ಪ್ರಕರಣದ ತೀರ್ಪು ಇದೀಗ ಹೊರಬಂದಿದ್ದು, ಆರೋಪಿ ಮಧುಕರ್ ಶೆಟ್ಟಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳು ಅಲ್ಲ : ರೇಣುಕಾಚಾರ್ಯ
ನವೆಂಬರ್ 19, 2013ರಂದು ಕಾರ್ಪೋರೇಷನ್ ಸರ್ಕಲ್ ನಲ್ಲಿರುವಂತ ಕಾರ್ಪೋರೇಷನ್ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಳ್ಳುವಂತ ಸಂದರ್ಭದಲ್ಲಿ ಮ್ಯಾನೇಜರ್ ಜ್ಯೋತಿ ಉದಯ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ಶೆಟ್ಟಿ, ಹಣ ದೋಚಿಕೊಂಡು ಪರಾರಿಯಾಗಿದ್ದನು. ಪ್ರಕರಣ ನಡೆದು ವರ್ಷಗಳ ನಂತ್ರ ತಮಿಳುನಾಡಿನಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿರುವ 65ನೇ ಸಿಸಿಹೆಚ್ ಕೋರ್ಟ್, ಆರೋಪಿ ಮಧುಕರ್ ಶೆಟ್ಟಿಯನ್ನ ಅಪರಾಧಿ ಎಂದು ತೀರ್ಪು ನೀಡಿದೆ. ಅಲ್ದೇ ಆರೋಪಿ ಮಧುಕರ್ ಶೆಟ್ಟಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಕೇಂದ್ರ ಬಜೆಟ್-2021 | ಸ್ವಾವಲಂಬಿ ಭಾರತ ನಿರ್ಮಾಣ, ಅರ್ಥವ್ಯವಸ್ಥೆ ಪುನಶ್ಚೇತನದ ಬಜೆಟ್: ಸಿಎಂ ಯಡಿಯೂರಪ್ಪ ಮೆಚ್ಚುಗೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








