ಹುಡುಗಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ರಚಿಸಿ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಹೈದರಾಬಾದ್, ಫೆಬ್ರವರಿ04: ಹೈದರಾಬಾದ್ ನ ಸೈಬರ್ ಕ್ರೈಮ್ ಪೊಲೀಸರು ಹುಡುಗಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆಯನ್ನು ರಚಿಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತ 70 ಕ್ಕೂ ಹೆಚ್ಚು ಮಹಿಳೆಯರನ್ನು ಮಾರ್ಫಡ್ ಚಿತ್ರಗಳಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆರೋಪಿಯಿಂದ ಬ್ಲ್ಯಾಕ್ ಮೇಲ್ ಗೆ ಒಳಗಾದ ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ತಿಳಿಸಿರುವ ಪ್ರಕಾರ, ವಿಜಯವಾಡ ಮೂಲದ ಸುಮಂತ್ ಎಂಬಾತ ಮಣಿಕೋಂಡದಲ್ಲಿ ವಾಸಿಸುತ್ತಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅವನು ಹುಡುಗಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆಯನ್ನು ರಚಿಸಿದ್ದು, ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ಗಳನ್ನು ಕಳುಹಿಸುತ್ತಿದ್ದ.
ಸೌದಿ ಅರೇಬಿಯಾ – ಭಾರತ ಸೇರಿದಂತೆ 20 ದೇಶಗಳ ಪ್ರಯಾಣಿಕರ ಪ್ರವೇಶಕ್ಕೆ ನಿಷೇಧ
ಸ್ವಲ್ಪ ಸಮಯದವರೆಗೆ ಚಾಟ್ ಮಾಡಿ ಮತ್ತು ಅವರೊಂದಿಗೆ ಸ್ನೇಹ ಬೆಳೆಸಿದ ನಂತರ ಆರೋಪಿಯು ಅವರ ಬಳಿ ತಮ್ಮ ಖಾಸಗಿ ಚಿತ್ರಗಳನ್ನು ಕಳುಹಿಸುವಂತೆ ಕೇಳುತ್ತಿದ್ದ. ಆತನ ಮೋಸದ ಜಾಲಕ್ಕೆ ಸಿಲುಕಿದ ಯುವತಿಯರು ಆತನನ್ನು ಹುಡುಗಿ ಎಂದು ತಿಳಿದು ತಮ್ಮ ಪ್ರೈವೇಟ್ ಫೋಟೋಗಳನ್ನು ಕಳುಹಿಸುತ್ತಿದ್ದರು.
ಬಳಿಕ ಆರೋಪಿಯು ತಾನು ಹೇಳಿದ ಹಾಗೆ ಕೇಳದಿದ್ದರೆ ಅವರ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಯುವತಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
ಮಹಿಳೆಯೊಬ್ಬರಿಂದ ದೂರು ಸ್ವೀಕರಿಸಿದ ನಂತರ, ಸೈಬರ್ ಕ್ರೈಮ್ ಪೊಲೀಸರು ಸುಮಂತ್ ನನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಹಾ ಪ್ರಿಯರು ತಿಳಿದುಕೊಂಡಿರಬೇಕಾದ ಅತಿ ಮುಖ್ಯ ಮಾಹಿತಿಗಳು https://t.co/qRjNOVqDe4
— Saaksha TV (@SaakshaTv) February 3, 2021
ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಇಲ್ಲಿದೆ ಪೋಸ್ಟ್ ಆಫೀಸ್ ನ ಅತ್ಯುತ್ತಮ ಯೋಜನೆhttps://t.co/8E72nNsNpo
— Saaksha TV (@SaakshaTv) February 3, 2021