ಮತ್ತೆ ಏರಿಕೆ ಕಂಡ ಪೆಟ್ರೋಲ್, ಡಿಸೇಲ್ ಬೆಲೆ | ಯಾರು ಧ್ವನಿ ಎತ್ತುತ್ತಿಲ್ಲವೇಕೆ..?
ನವದೆಹಲಿ : ದೇಶದಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡು ದಾಖಲೆ ಮಟ್ಟ ತಲುಪಿದೆ. ಸತತ ಏಳು ದಿನಗಳವರೆಗೆ ಸ್ಥಿರವಾಗಿದ್ದ ಬೆಲೆ ಇಂದ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ 35 ಪೈಸೆ ಏರಿಕೆ ಕಂಡಿದೆ.
ದೇಶದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿವೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಬೆಲೆಯನ್ನು ಲೀಟರ್ಗೆ 35 ಪೈಸೆ ಹೆಚ್ಚಿಸಿವೆ.
ಆ ಮೂಲಕ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ ಬೆಲೆ 86.65 ರೂಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಕೂಡ ಲೀಟರ್ಗೆ 35 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಲೀಟರ್ಗೆ. 76.83ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 89.52ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ 81.42 ರೂಗೆ ಏರಿಕೆಯಾಗಿದೆ.
ಇನ್ನು ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 93.18ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 83.65ರೂಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 87.99ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 80.39ರೂಗೆ ಏರಿಕೆಯಾಗಿದೆ.
ಅದೇ ಚೆನ್ನೈ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 89.11ರೂ, ಡೀಸೆಲ್ ದರ ಪ್ರತೀ ಲೀಟರ್ ಗೆ 82.03ರೂ. ಹೈದರಾಬಾದ್ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 90.08ರೂ, ಡೀಸೆಲ್ ದರ ಪ್ರತೀ ಲೀಟರ್ ಗೆ 83.79ರೂಗೆ ಏರಿಕೆಯಾಗಿದೆ.
ಯಾರು ಧ್ವನಿ ಎತ್ತುತ್ತಿಲ್ಲವೇಕೆ..?
ಈ ಹಿಂದೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದ ಸಂದರ್ಭದಲ್ಲಿ ದೇಶದಾದ್ಯಂತ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಜನರು ಕೂಡ ಪಕ್ಷಾತೀತವಾಗಿ ನಿಂತು ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಅಂದು ವಿರೋಧ ಪಕ್ಷವಾಗಿದ್ದ ಬಿಜೆಪಿ ತೈಲ ಬೆಲೆ ಏರಿಕೆಯನ್ನ ಖಂಡಿಸಿ ಭಾರಿ ಪ್ರತಿಭಟನೆಗಳನ್ನು ನಡೆಸಿತ್ತು.
ಚುನಾವಣಾ ಪ್ರಚಾರದಲ್ಲಿ ತೈಲ ಬೆಲೆ ಏರಿಕೆಯನ್ನ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅತೀ ಕಡಿಮೆ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಪೂರೈಸೋದಾಗಿ ಭರವಸೆ ನೀಡಿದ್ದರು. ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರು ಹೊಸಬರಿಗೆ ಅಧಿಕಾರ ನೀಡಿದರು.
ಆದ್ರೆ ಹೊಸಬರು, ಹೊಸ ಪಕ್ಷ, ಹೊಸ ನಾಯಕ ಅಧಿಕಾರಕ್ಕೆ ಬಂದ್ರೂ ಕೂಡ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆಗಿಂತಲೂ ಈಗ ತೈಲ ಬೆಲೆ ಹೆಚ್ಚಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದ್ರೂ ಈ ಬಗ್ಗೆ ಯಾರು ಧ್ವನಿ ಎತ್ತುತ್ತಿಲ್ಲ. ಇದರ ಬಗ್ಗೆ ರಚನಾತ್ಮಕವಾಗಿ ಟೀಕೆ ಮಾಡಿ, ಸರ್ಕಾರಕ್ಕೆ ಚಳಿ ಬಿಡಿಸಬೇಕಿದ್ದ ವಿಪಕ್ಷಗಳು ರಾಜಕೀಯ ಆರೋಪಗಳನ್ನು ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ.
ಒಟ್ಟಾರೆ ಒಂದು ಮಾತು… ಯಾವುದೇ ಪಕ್ಷವಿರಲಿ, ನಾಯಕರಾಗಲಿ ಜನರ ಹಿತ ಕಾಯಬೇಕು. ಮೊದಲು ದೇಶ (ಜನರು), ಆಮೇಲೆ ಪಕ್ಷ.








