ಫೆಬ್ರವರಿ 13 ರಿಂದ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ಆ್ಯಂಟಿ ಕೋವಿಡ್ ಲಸಿಕೆ
ಹೊಸದಿಲ್ಲಿ, ಫೆಬ್ರವರಿ05: ಫೆಬ್ರವರಿ 13 ರಿಂದ ದೇಶಾದ್ಯಂತದ ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ಆ್ಯಂಟಿ-ಕೊರೊನಾವೈರಸ್ ಲಸಿಕೆ ನೀಡಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬುಧವಾರ ಹೇಳಿದೆ. ದೇಶದ ಸುಮಾರು 50 ಪ್ರತಿಶತದಷ್ಟು ಆರೋಗ್ಯ ಕಾರ್ಯಕರ್ತರಿಗೆ ಈಗಾಗಲೇ ಇಲ್ಲಿಯವರೆಗೆ ಲಸಿಕೆ ನೀಡಲಾಗಿದೆ. ದೇಶದ ಮೊದಲ ವ್ಯಾಕ್ಸಿನೇಷನ್ ಡ್ರೈವ್ ಜನವರಿ 16 ರಿಂದ ಪ್ರಾರಂಭವಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ , ವ್ಯಾಕ್ಸಿನೇಷನ್ ಡ್ರೈವ್ ನಡೆಸಲು 5,900 ಕ್ಕೂ ಹೆಚ್ಚು ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು 1,239 ಖಾಸಗಿ ಸೌಲಭ್ಯಗಳನ್ನು ಬಳಸಲಾಗುತ್ತಿದೆ.
ಫೆಬ್ರವರಿ 13 ರಿಂದ ಆರೋಗ್ಯ ಸೇವಕರಿಗೆ ಎರಡನೇ ಡೋಸ್ ಆ್ಯಂಟಿ-ಕೊರೊನಾವೈರಸ್ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ – ಒರ್ವ ಭಾರತೀಯ ಯೋಧ ಹುತಾತ್ಮ
ಕಳೆದ ತಿಂಗಳು, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಎರಡು ಲಸಿಕೆಗಳಿಗೆ ಅನುಮೋದನೆ ನೀಡಿತು. ಅವುಗಳೆಂದರೆ ಭಾರತ್ ಬಯೋಟೆಕ್ನ ಕೊವಾಕ್ಸಿನ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್. ದೇಶದಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಡ್ರೈವ್ ಜನವರಿ 16 ರಿಂದ ಪ್ರಾರಂಭವಾಯಿತು.

ಸಾಂಕ್ರಾಮಿಕ ಸಮಯದಲ್ಲಿ, ಸಂಸ್ಥೆಯು ಭಾರತದ ಆರೋಗ್ಯ ಮೂಲಸೌಕರ್ಯವನ್ನು ಒಂದು ಲ್ಯಾಬ್‌ನಿಂದ 2,500 ಲ್ಯಾಬ್‌ಗಳಿಗೆ ಹೆಚ್ಚಿಸಿದೆ ಎಂದು ಸಂದರ್ಶನದಲ್ಲಿ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 69,365 ಮತ್ತು 38,762 ಕ್ರಿಯಾಶೀಲ ಪ್ರಕರಣಗಳು ಪತ್ತೆಯಾಗಿದ್ದು, ದೇಶದ ಒಟ್ಟು COVID-19 ಪ್ರಕರಣಗಳಲ್ಲಿ ಸುಮಾರು 70 ಪ್ರತಿಶತದಷ್ಟು ಪ್ರಕರಣಗಳು ಈ ರಾಜ್ಯಗಳಿಂದ ದಾಖಲಾಗಿದೆ ಎಂದು ಭೂಷಣ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1356996556046491650?s=19
https://twitter.com/SaakshaTv/status/1356996818500874241?s=19








