ಬೇಬಿ ಬಂಪ್ ಪ್ರದರ್ಶಿಸಿದ ನಟಿ ಕರೀನಾ ಕಪೂರ್..!
ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಕಾನ್ ದಂಪತಿ ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಕರೀನಾ ಬೇಬಿ ಬಂಪ್ ಫೋಟೋ ಶೂಟ್ ನ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಮತ್ತೆ ಕಮೆಂಟ್ ಗಳು ಹರಿಬುಬರುತ್ತಿವೆ. ಸ್ಕೈ ಬ್ಲೂ ಬಣ್ಣ ಬಟ್ಟೆ ಧರಿಸಿರುವ ಕರೀನಾ ತಮ್ಮ ಹೊಟ್ಟೆಯನ್ನ ಹಿಡಿದಿಕೊಂಡು ಬೂಮ್ರಾಂಗ್ ಮಾಡಿದ್ದಾರೆ. ‘9ನೇ ತಿಂಗಳು ಹಾಗೂ ಶಕ್ತಿಶಾಲಿಯಾಗಿ ಸಾಗುತ್ತಿದ್ದೇನೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸದ್ಯ ಕರೀನಾ ಪೋಸ್ಟ್ ಸಖತ್ ವೈರಲ್ ಆಗ್ತಾಯಿದೆ.
https://www.instagram.com/p/CK3UqDhpXZ1/?utm_source=ig_web_copy_link
ಪಾಕಿಸ್ತಾನಕ್ಕೆ ಮರ್ಮಾಘಾತ : ಇರಾನ್ ನಿಂದ ಮತ್ತೊಂದು Surgical Strike..!
ಕರೀನಾ ಕಪೂರ್ ಆಗಾಗ ತಮ್ಮ ಹಾಗೂ ಮಗುವಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ ಡೇಟ್ ಮಾಡ್ತಾಯಿರುತ್ತಾರೆ. ಇತ್ತೇಚೆಗಷ್ಟೇ ಕರೀನಾ ತಮ್ಮ ಗರ್ಭಾವಸ್ಥೆಯಲ್ಲಿ ಮಾಡಿದ ಯೋಗಾಸದ ಫೋಟೋಗಳನ್ನ ಹಂಚಿಕೊಂಡಿದ್ರು. ಇದು ಸಹ ಸಖತ್ ವೈರಲ್ ಆಗಿತ್ತು. ಅಲ್ಲದೇ ಈ ಹಿಂದೆಯೂ ಸಹ ಬೇಬಿ ಬಂಪ್ ಫೋಟೋಸ್ ಶೇರ್ ಮಾಡಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದರು.
ರಾಮ ಮಂದಿರ ನಿರ್ಮಾಣಕ್ಕೆ `ಜಾಮಿಯಾ ಮಸೀದಿ’ಯಿಂದ ದೇಣಿಗೆ..!
ಕರೀನಾ ಹಾಗೂ ಸೈಫ್ ಜೋಡಿ 2012 ರಲ್ಲಿ ವಿವಾಹವಾಗಿದ್ದರು. ಬಳಿಕ ಈ ಜೋಡಿ ಮೊದಲ ಮಗುವಿಗೆ ಜನ್ಮ ನೀಡಿತ್ತು. ಮೊದಲ ಮಗನಿಗೆ ಈಗ 4 ವರ್ಷ ತುಂಬಿದ್ದು, ತೈಮೂರ್ ಅಲಿ ಖಾನ್ ಎಂಬ ಹೆಸರಿಡಲಾಗಿದೆ. ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿ ಇದೆ.
ಅಪ್ರಾಪ್ತೆ ಸ್ವಇಚ್ಛೆಯಿಂದ ವಿವಾಹವಾದ್ರು, ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ – ನ್ಯಾಯಾಲಯ..!
ಅಂದ್ಹಾಗೆ ಕರೀನಾ ಸಿನಿಮಾಗಳ ಅಪ್ ಡೇಟ್ ಬಗ್ಗೆ ಮಾತನಾಡೋದಾದ್ರೆ ಕೊನೆಯದಾಗಿ ನಟಿ ಕಾಣಿಸಿಕೊಂಡಿರುವ ಸಿನಿಮಾ ಅಂಗ್ರೇಜಿ ಮೀಡಿಯಮ್. ಇನ್ನೂ ಮುಂದೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕರೀನಾ ನಟಿಸಬೇಕಾಗಿದೆ. ಆದ್ರೆ ಆ ಸಿನಿಮಾ ತಡವಾಗಿ ಸೆಟ್ಟೇರಲಿದೆ.
https://www.instagram.com/p/CK3OHQ8FJwA/?utm_source=ig_embed
ಚೀನಾದಲ್ಲಿ ಸಿಲುಕಿರುವ ಭಾರತದ ನಾವಿಕರ ಬಿಡುಗಡೆಗೆ ಕೊನೆಗೂ ಚೀನಾ ಒಪ್ಪಿಗೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







