ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗೆ 25 ದೇಶಗಳು ಕಾಯುತ್ತಿವೆ : ಜೈಶಂಕರ್
ಭಾರತದಲ್ಲಿ ಸಿದ್ಧವಾಗಿರುವ ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗಳಿಗಾಗಿ 25 ದೇಶಗಳು ಕಾಯುತ್ತಿವೆ ಎಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಕೇಂದ್ರವು ಈಗಾಗಲೇ ಎರಡು ಕೋವಿಡ್19 ಲಸಿಕೆಗಳಿಗೆ ಅನುಮತಿ ನೀಡಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಮತ್ತು ಆಕ್ಸ್ಫರ್ಡ್ನ ಕೋವಿಶೀಲ್ಡ್ ಗೆ ಅನುಮತಿ ಸಿಕ್ಕಿದೆ. ಈ ಎರಡೂ ಲಸಿಕೆಗಳನ್ನು ಜನವರಿ 16 ರಿಂದ ತುರ್ತು ಪರಿಸ್ಥಿತಿಯಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.
ಲಾರಿಯನ್ನ ಓವರ್ ಟೇಕ್ ಮಾಡಿದ್ದಕ್ಕೆ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ..!
ಭಾರತದಿಂದ ಲಸಿಕೆ ಪಡೆಯಲು ಉತ್ಸುಕರಾಗಿರುವ ಮೂರು ವರ್ಗಗಳ ದೇಶಗಳಿವೆ- ಬಡ ರಾಷ್ಟ್ರಗಳು, ಬೆಲೆ ಸೂಕ್ಷ್ಮ ರಾಷ್ಟ್ರಗಳು ಮತ್ತು ಇತರ ದೇಶಗಳು ನೇರವಾಗಿ ಲಸಿಕೆಯನ್ನು ತಯಾರಿಸುವ ಔಷಧೀಯ ಕಂಪನಿಗಳೊಂದಿಗೆ ಅವು ವ್ಯವಹರಿಸುತ್ತವೆ. ಕೆಲವು ದೇಶಗಳು ಭಾರತೀಯ ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ನೇರ ಒಪ್ಪಂದಗಳನ್ನು ಹೊಂದಿವೆ ಮತ್ತು ವಾಣಿಜ್ಯ ಮಾತುಕತೆ ನಡೆಸಿವೆ ಎಂದು ಅವರು ಹೇಳಿದರು. ಈಗಾಗಲೇ ಸುಮಾರು 15 ದೇಶಗಳಿಗೆ ಲಸಿಕೆ ಸರಬರಾಜು ಮಾಡಿದ್ದೇವೆ. ಸರದಿಯಲ್ಲಿ ವಿವಿಧ ಹಂತಗಳಲ್ಲಿರುವ ಸುಮಾರು 25 ದೇಶಗಳು ಇದೆ. ಈ ನಮ್ಮ ಸಾಧನೆ ಭಾರತವನ್ನು ಜಗತ್ತಿನ ಭೂಪಟದಲ್ಲಿ ಉತ್ತುಂಗಕ್ಕೆ ಏರಿಸಿದೆ. ಎಂದು ಜೈಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








