ಮದಗಜ Updates – ಫೆ.12ಕ್ಕೆ ಜಗಪತಿ ಬಾಬು ಫಸ್ಟ್ ಲುಕ್ ರಿಲೀಸ್..!
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಸ್ಯಾಂಡಲ್ ವುಡ್ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ ಮದಗಜ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಸಿನಿಮಾದ ಮತ್ತೊಂದು ಅಪ್ ಡೇಟ್ಸ್ ಸಿಕ್ಕಿದೆ. ಅದೇನೆಂದ್ರೆ ಚಿತ್ರದಲ್ಲಿ ಖಡಲ್ ವಿಲ್ಲನ್ ಆಗಿ ಕಾಣಿಸಿಕೊಳ್ತಿರುವ ಜಗಪತಿ ಬಾಬು ಫಸ್ಟ್ ಲುಕ್ ಅನಾವರಣಗೊಳ್ಳುವ ದಿನಾಂಕವನ್ನ ಸಿನಿಮಾ ತಂಡ ರಿವೀಲ್ ಮಾಡಿದೆ. ಫೆಬ್ರವರಿ 12 ರಂದು ಬೆಳಗ್ಗೆ 9.09 ಗಂಟೆಗೆ ಮದಗಜ ಚಿತ್ರದ ಖಳನಾಯಕನ ಲುಕ್ ಅನಾವರಣಗೊಳ್ಳಲಿದೆ. ಅಂದ್ಹಾಗೆ ಇದೇ ದಿನ ಲುಕ್ ರಿಲೀಸ್ ಮಾಡುತ್ತಿರೋದಕ್ಕೆ ವಿಶೇಷ ಕಾರಣ ಇದೆ.
ಮುತ್ತಿನ ನಗರಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಸಲಾರ್’ ..!
ಫೆಬ್ರವರಿ 12 ರಂದು ಖ್ಯಾತ ನಟ ಜಗಪತಿ ಬಾಬು ಅವರ ಬರ್ತ್ ಡೇ.. ಇದೇ ಪ್ರಯುಕ್ತ ಅವರ ಲುಕ್ ರಿಲೀಸ್ ಮಾಡುವ ಮೂಲಕ ವಿಶ್ ಮಾಡಲು ಮದಗಜ ಟೀಂ ನಿರ್ಧಾರ ಮಾಡಿದೆ. ಈ ಕುರಿತು ಉಮಾಪತಿ ಫಿಲಂಸ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಸಿನಿಮಾಗೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳ್ತಾಯಿದ್ದು, ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡ್ತಿದ್ದಾರೆ. ಆಶಿಕಾ ರಂಗನಾಥ್ ಶ್ರೀಮುರಳಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿದೆ. ಮೂರು ಭಾಷೆಯಲ್ಲಿ ಈಗಾಗಲೇ ಟೀಸರ್ ರಿಲೀಸ್ ಆಗಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದಿದೆ.
video : ವರ್ಕೌಟ್ ವಿಡಿಯೋ ಹಂಚಿಕೊಂಡ ‘ಬಾಹುಬಲಿಯ ಬಲ್ಲಾಳದೇವ’..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel