ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಚರಣೆ ನಡೆಸಿದೆ. 24 ಗಂಟೆಗಳಲ್ಲಿ 9 ಜನ ಉಗ್ರರನ್ನು ಹೊಡೆದುರುಳಿಸಿದೆ. ಇಡಿ ವಿಶ್ವವೇ ಕೊರೊನಾ ಹೊಡೆತಕ್ಕೆ ತತ್ತರಿಸಿದೆ. ಇದಕ್ಕೆ ಭಾರತ ಹೊರತಲ್ಲ. ಹಾಗಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ದೇಶದ ಜನರು ಆತಂಕದಲ್ಲಿದ್ದಾರೆ.ಇಂತಹ ಸಮಯದಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ತಮ್ಮ ನೀಚ ಬುದ್ದಿ ಪ್ರದರ್ಶನ ಮಾಡಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ 9 ಜನ ಉಗ್ರರನ್ನು ಮಟ್ಟ ಹಾಕಿದೆ.
ದಕ್ಷಿಣ ಕಾಶ್ಮೀರದ ಬಾಟ್ಪುರ್ ದಲ್ಲಿ ನಿನ್ನೆ ನಾಲ್ಕು ಜನ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಅಲ್ಲದೆ ಇಂದು ಎಲ್ .ಓ ಸಿ ಯ ಕೆರಾನ್ ಸೆಕ್ಟರ್ ನಲ್ಲಿ 5 ಜನ ಉಗ್ರರನ್ನು ಮಟ್ಟ ಹಾಕಲಾಗಿದೆ. ಒಟ್ಟಿನಲ್ಲಿ 24 ಘಂಟೆ ಯಲ್ಲಿ 9 ಜನ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ ಉಗ್ರರಿಗೆ ತಕ್ಕ ಪಾಠ ಕಲಿಸಿದೆ.








