ಮಹಿಳಾ ಕಂಡಕ್ಟರ್ ಗಳಿಗೆ ಶಿಫ್ಟ್ ವೈಸ್ ಕೆಲಸ ಮಾಡಲು BMTC ಅಸ್ತು.!
ಬೆಂಗಳೂರು: ಇಂದಿನಿಂದ ಬಿಎಂಟಿಸಿ ಮಹಿಳಾ ಸಿಬ್ಬಂದಿಗಳಿಗೆ ಮೊದಲ ಪಾಳಿ, ಸಾಮಾನ್ಯ ಪಾಳಿ ನೀಡಲು ಸುತ್ತೋಲೆ ಹೊರಡಿಸಿದೆ. ವಿಶೇಷವಾಗಿ ಗರ್ಭಿಣಿಯರು, ಚಿಕ್ಕ ಮಕ್ಕಳಿರುವ ಮಹಿಳಾ ಸಿಬ್ಬಂದಿಗಳಿಗೆ ಅನುಕೂಲವಾಗುವ ಶಿಫ್ಟ್ ಗೆ ಬರಲು ಒಪ್ಪಿಗೆ ನಿಡಲಾಗಿದೆ.
ಮಹಿಳಾ ಸಿಬ್ಬಂದಿಗಳಿಗೆ ಮಾರ್ನಿಂಗ್ ಹಾಗೂ ಜನರಲ್ ಶಿಫ್ಟ್ ನೀಡಲಾಗುತ್ತಿದ್ದು, ಬಸ್ ರೂಟ್ ನೀಡುವಾಗ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇತ್ತೀಚೆಗೆ ಮಹಿಳಾ ಕಂಡಕ್ಟರ್ ಗಳು ವಿಡಿಯೋವೊಂದನ್ನು ಮಾಡಿ ತಮ್ಮ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಕೆಲಸದ ವೇಳೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಮಹಿಳಾ ನಿರ್ವಾಹಕರ ನೋವಿಗೆ ಸ್ಪಂದಿಸಿರುವ ಬಿಎಂಟಿಸಿ ಇದೀಗ ಮಹಿಳಾ ಸಿಬ್ಬಂದಿಗಳಿಗೆ ಶಿಫ್ಟ್ ಹಾಕಲು ನಿರ್ಧರಿಸಿದೆ.
ಅಯೋಧ್ಯೆ ರಾಮ ಮಂದಿರ – ದೇಣಿಗೆ ಅಭಿಯಾನಕ್ಕೆ ಮುಸ್ಲಿಂ ಸಮುದಾಯವನ್ನು ಸೇರಿಸಲು ಆರ್‌ಎಸ್‌ಎಸ್ ನಿರ್ಧಾರ
ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿ ಮಾಡುವ ಐಪಿಎಲ್ ಫ್ರಾಂಚೈಸಿ ಯಾವುದು ?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel