`ನ ದಯಾನಂ ನ ಪಲಾಯಂ’.. ನಾನು ಒಂಟಿ ಸಲಗನೇ : ಯತ್ನಾಳ್
ಬೆಂಗಳೂರು : ನಾನು ಪಕ್ಷದ ವಿರುದ್ಧ ಯಾವ ಕೆಲಸವನ್ನೂ ಮಾಡಿಲ್ಲ, ರಾಷ್ಟ್ರ ನಾಯಕರ ವಿರುದ್ಧವೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ ನಾನು ಯಾವುದಕ್ಕೂ ಅಂಜುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಪದೇ ಪದೇ ಮುಖ್ಯಮಂತ್ರಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲ ಅವರಿಗೆ ರಾಜ್ಯ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಶೋಕಾಸ್ ನೋಟಿಸ್ ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಆದ್ರೆ ನನಗೆ ನೋಟಿಸ್ ತಲುಪಿಲ್ಲ. ನಾಳೆ ನೋಟಿಸ್ ಬಂದ್ರೆ ಅದನ್ನ ಓದಿಕೊಂಡು ಸ್ಪಷ್ಟನೆ ಕೊಡುತ್ತೇನೆ ಎಂದಿದ್ದಾರೆ.
ಇನ್ನು ಯಾವ ಸಂದರ್ಭದಲ್ಲೂ ನಾನು ಪಕ್ಷದ ವಿರುದ್ಧ ಯಾವ ಕೆಲಸವನ್ನೂ ಮಾಡಿಲ್ಲ. ರಾಷ್ಟ್ರ ನಾಯಕರ ವಿರುದ್ಧವೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ ನಾನು ಯಾವುದಕ್ಕೂ ಅಂಜುವುದಿಲ್ಲ.
ನ ದಯಾನಂ ನ ಪಲಾಯಂ ಸತ್ಯಮೇವ ಜಯತೇ ಎಂದು ಹೇಳಿದ ಅವರು, ಮಂತ್ರಿ ಆಗಿಲ್ಲ ಅನ್ನೋ ಅಸಮಾಧಾನದಿಂದ ಯತ್ನಾಳ್ ಹೀಗೆ ಮಾತನಾಡುತ್ತಿದ್ದಾರೆ ಅಂತ ಮಾಧ್ಯಮಗಳು ಸುದ್ದಿ ಮಾಡುತ್ತಿವೆ.
ಆದ್ರೆ ನಾನು ಮಂತ್ರಿ ಆಗಬೇಕು ಎಂದು ಎಲ್ಲೂ ಹೇಳಿಲ್ಲ ಎಂದಿದ್ದಾರೆ.
ನಾನು ಜನಪರವಾಗಿರುತ್ತೇನೆ. ಹಾಗಾಗಿಯೇ ಜನಪರ ಹೇಳಿಕೆ ಕೊಟ್ಟಿದ್ದೇನೆ ಅಷ್ಟೆ. ಸಿದ್ದರಾಮಯ್ಯ, ಜೆ ಎಚ್ ಪಟೇಲ್, ವೀರೇಂದ್ರ ಪಾಟೀಲರೇ ನನ್ನ ಹೊಗಳಿದ್ದಾರೆ. ಆದರೆ ನಾನು ಯಾರ ಮುಲಾಜಿನಲ್ಲೂ ಇಲ್ಲ. ನನ್ನ ಸ್ವಾರ್ಥಕ್ಕಾಗಿ ನಾನು ರಾಜಕಾರಣ ಮಾಡಿದವನಲ್ಲ.
ಮೋದಿಯವರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯಲಿಲ್ಲ ಎಂದರೆ ನಾನು ಟೀಕೆ ಮಾಡುತ್ತೇನೆ. ನಾನು ಯಾಕೆ ಮಾತಾಡಿದೆ ಅಂತ ತಿಳಿಸುತ್ತೇನೆ..
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಯಾವ ಕಾರಣಕ್ಕಾಗಿ ನಾನು ಹೇಳಿಕೆ ಕೊಟ್ಟೆ ಎಂದು ಸ್ಪಷ್ಟೀಕರಣ ಕೊಡುತ್ತೇನೆ. ಹೇಳೋರು ಹೇಳ್ತಾರೆ ನಾನು ಒಬ್ಬಂಟಿಗ ಅಂತ. ಯಾರೂ ಇಲ್ಲದಿದ್ದರೂ ನಾನು ಒಂಟಿ ಸಲಗನೇ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









