ಐಪಿಎಲ್ ನಲ್ಲಿ ಅಚ್ಚರಿಯ ಕರೆ ಬಂದ್ರೂ ಬರಬಹುದು.. ನಿರೀಕ್ಷೆಯಲ್ಲಿದ್ದಾರೆ ಕೇರಳ ವೇಗಿ ಶ್ರೀಶಾಂತ್…!
ಸ್ಪಾಟ್ ಫಿಕಿಂಗ್ಸ್ ಆರೋಪದಿಂದ ಹೊರಬಂದ್ರೂ ವೇಗಿ ಶ್ರೀಶಾಂತ್ ಮೇಲೆ ಐಪಿಎಲ್ ಫ್ರಾಂಚೈಸಿಗಳಿಗೆ ನಂಬಿಕೆ ಇಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನ ಲಿಸ್ಟ್ ನಲ್ಲಿದ್ರೂ ಅಂತಿಮ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರು ಕಾಣಿಸಿಕೊಂಡಿಲ್ಲ.
38ರ ಹರೆಯದ ಶ್ರೀಶಾಂತ್ ತಾನು ಕಳಂಕದಿಂದ ಹೊರಬರಲು ಈ ಬಾರಿಯ ಐಪಿಎಲ್ ವೇದಿಕೆಯಾಗುತ್ತೆ ಅಂತ ಅಂದುಕೊಂಡಿದ್ದರು. ಆದ್ರೆ ಫ್ರಾಂಚೈಸಿಗಳು ಶ್ರೀಶಾಂತ್ ಮೇಲೆ ಒಲವು ತೋರಿಸಿಲ್ಲ. ಇದ್ರಿಂದ ಫೆಬ್ರವರಿ 18ರಂದು ನಡೆಯಲಿರುವ ಹರಾಜಿನಲ್ಲಿ ಶ್ರೀಶಾಂತ್ ಗೆ ಸ್ಥಾನವಿಲ್ಲ.
ಆದ್ರೂ ಶ್ರೀಶಾಂತ್ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡಿಲ್ಲ. ಈ ಹಿಂದೆ ಕ್ರಿಸ್ ಗೇಲ್ ಐಪಿಎಲ್ ಹರಾಜಿನಲ್ಲಿ ಯಾರು ಖರೀದಿ ಮಾಡದಿದ್ರೂ ಕೊನೆ ಕ್ಷಣದಲ್ಲಿ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಅದೇ ರೀತಿಯ ಅವಕಾಶ ತನಗೂ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ ಶ್ರೀಶಾಂತ್. ಈ ಬಗ್ಗೆ ಸ್ವತಃ ಶ್ರೀಶಾಂತ್ ಅವರೇ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.
ಶ್ರಿಶಾಂತ್‍ಗೆ ಬೇಸರವಾಗಿದ್ದು ನಿಜ. ಆದ್ರೆ ಪ್ರಯತ್ನವನ್ನು ಬಿಡಲಾರೆ. ಈ ವರ್ಷ ಆಗಿಲ್ಲ ಅಂದ್ರೂ ಮುಂದಿನ ಐಪಿಎಲ್ ನಲ್ಲಿ ನಾನು ಆಡುತ್ತೇನೆ. ನನಗೆ ಈಗ 38 ವರ್ಷ. ಹಾಗಾಗಿ ನಾನು ಐಪಿಎಲ್ ನಲ್ಲಿ ಆಡುವ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಶ್ರೀಶಾಂತ್ ಅವರಿಗೆ ಅಜೀವ ನಿಷೇಧ ಹೇರಲಾಗಿತ್ತು. ಆದ್ರೆ ಹಠ ಬಿಡದ ಶ್ರಿಶಾಂತ್ ನ್ಯಾಯಾಲಯ ಮೆಟ್ಟಿಲೆರಿದ್ದರು. ಅಲ್ಲದೆ ನಿಷೇಧದ ಶಿಕ್ಷೆಯಿಂದ ಬಚಾವ್ ಆಗಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ರು.
ಇದಾದ ಬಳಿಕ ಕೇರಳ ರಾಜ್ಯ ತಂಡದಲ್ಲಿ ಇತ್ತೀಚೆಗೆ ಮುಕ್ತಾಯವಾದ ಸಯ್ಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿಯಲ್ಲೂ ಆಡಿದ್ದರು. ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಆಡುವ ಆಸೆ ಇದ್ರೂ ಇದೀಗ ಅದು ಕೂಡ ಭಗ್ನಗೊಂಡಿದೆ. ಆದ್ರೂ ಅವಕಾಶ ಸಿಗಬಹುದು ಅನ್ನೋ ಆಶಾಭಾವನೆಯಲ್ಲಿದ್ದಾರೆ ಕೇರಳದ ವೇಗಿ ಶಾಂತಕುಮಾರ್ ಶ್ರೀಶಾಂತ್.








