ನಮ್ಮ `ಸಿಂಬಾ’ ಎಂದು ಮಗುವಿನ ವಿಡಿಯೋ ಹಂಚಿಕೊಂಡ ಮೇಘನಾ ರಾಜ್
ಬೆಂಗಳೂರು : ಪ್ರೇಮಿಗಳ ದಿನದಂದೇ ಜೂನಿಯರ್ ಚಿರುವಿನ ಫೋಟೋ/ ವಿಡಿಯೋ ರಿವೀಲ್ ಆಗಿದೆ. ವ್ಯಾಲೆಂಟೈನ್ಸ್ ಡೇ ದಿನದಂದು ಜೂನಿಯರ್ರರ ಚಿರುವಿನ ದರ್ಶನ ಮಾಡಿಸುತ್ತೇನೆ ಎಂದು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮೇಘನಾ ರಾಜ್ ಪೋಸ್ಟ್ ಹಾಕಿದ್ದರು.
ಅದರಂತೆ ಇಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಜೂನಿಯರ್ ಚಿರುವಿನ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನದ ಅಂಗವಾಗಿ ಮೊದಲ ಬಾರಿಗೆ ಪುಟ್ಟ ಕಂದಮ್ಮನ ವಿಡಿಯೋವನ್ನು ಫೋಟೋ ಮಾಡಿದ್ದಾರೆ.
ವಿಡಿಯೋವನ್ನ ನೋಡಿದ ಅಭಿಮಾನಿಗಳು ಜೂನಿಯರ್ ಚಿರುವಿಗೆ ಶುಭ ಹಾರೈಸುತ್ತಿದ್ದಾರೆ. ಲೈಕ್ಸ್ ಶೇರ್ ಮಾಡುತ್ತಾ ಖುಷಿ ಪಡುತ್ತಿದ್ದಾರೆ.
ಅಂದಹಾಗೆ ಕಳೆದ ಅಕ್ಟೋಬರ್ 22 ರಂದು ಮೇಘನಾ ರಾಜ್ ಗಂಡು ಮಗುವಿನ ಜನ್ಮ ನೀಡಿದ್ದರು. ವಿಶೇಷ ಅಂದ್ರೆ ಅಂದೇ ಚಿರು ಮತ್ತು ಮೇಘನಾ ಎಂಗೇಹ್ ಮೆಂಟ್ ಆಗಿದ್ದರು.
ಮಗು ಹುಟ್ಟಿದಾಗ ಫೋಟೋ ರಿವೀಲ್ ಮಾಡಿದ್ದ ಚಿರಂಜೀವಿ ಕುಟುಂಬ ಮತ್ತೇ ಯಾವತ್ತೂ ಮಗುವಿನ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ.
ವ್ಯಾಲೆಂಟೈನ್ಸ್ ಡೇ ದಿನ ಮಗುವನ್ನ ಜಗತ್ತಿಗೆ ಪರಿಚಯಿಸೋದಾಗಿ ಮೇಘನಾ ರಾಜ್ ಹೇಳಿಕೊಂಡಿದ್ದರು. ಅದರಂತೆ ಇಂದು ತಮ್ಮ ಪುಟ್ಟ ಕಂದಮ್ಮನ ವಿಡಿಯೋ ಹಂಚಿಕೊಂಡಿದ್ದಾರೆ.
https://www.instagram.com/tv/CLPhPpHFckM/?utm_source=ig_web_copy_link








