ಆಸ್ಟ್ರೇಲಿಯನ್ ಓಪನ್ 2021- ಕ್ವಾರ್ಟರ್ ಫೈನಲ್ ಗೆ ಜಾಕೊವಿಕ್, ಡಾಮಿನಿಕ್ ಥೀಮ್‍ಗೆ ಆಘಾತ…!
ಚಾಂಪಿಯನ್ ಆಟಗಾರ ನೊವಾಕ್ ಜಾಕೊವಿಕ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಸಂಖ್ಯೆಯನ್ನು 9ಕ್ಕೇರಿಸಿಕೊಳ್ಳುವ ತವಕದಲ್ಲಿರುವ ಜಾಕೊವಿಕ್ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಕೆನಡಾದ ಮಿಲೋಸ್ ರೌನಿಕ್ ಅವರನ್ನು ಪರಾಭವಗೊಳಿಸಿದ್ರು. ಗಾಯಗೊಂಡಿರುವ ಜಾಕೊವಿಕ್ ಅವರು 7-6, 4-6, 6-1, 6-4ರಿಂದ ಮಿಲೋಸ್ ರೌನಿಕ್ ಅವರನ್ನು ಮಣಿಸಿದ್ರು. ಕ್ವಾರ್ಟರ್ ಫೈನಲ್ ನಲ್ಲಿ ಜಾಕೊವಿಕ್ ಅವರು ಅಲೆಕ್ಸಾಂಡರ್ ಝಿವೆರೆವ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಮೂರನೇ ಶ್ರೇಯಂಕಿತ ಡಾಮಿನಿಕ್ ಥೀಮ್ ಅವರು ಸೋಲು ಅನುಭವಿಸಿದ್ದಾರೆ, ಡಾಮಿನಿಕ್ ಥೀಮ್ ಅವರು 4-6, 4-6, 0-6 ನೇರ ಸೆಟ್ ಗಳಿಂದ ಬಲ್ಗೆರಿಯಾದ ಗ್ರಿಗೋರ್ ಡಿಮಿಟ್ರೋವ್ ವಿರುದ್ಧ ಸೋಲು ಅನುಭವಿಸಬೇಕಾಯ್ತು.
ಹಾಗೇ ಜರ್ಮನಿಯ ಆರನೇ ಶ್ರೇಯಾಂಕಿತ ಅಲೆಕ್ಸಾಂಡರ್ ಝಿವೆರೆವ್ 6-4, 7-6, 6-3ರಿಂದ ಸರ್ಬಿಯಾದ ದುಸಾನ್ ಲಾಜೊವಿಕ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾಗಿದ್ದಾರೆ. ಇನ್ನೊಂದೆಡೆ ರಷ್ಯಾದ ಅಸ್ಲಾನ್ ಕಾರಟ್ಸೆವ್ 3-6, 6-1, 6-3, 6-4ರಿಂದ ಫೆಲಿಕ್ಸ್ ಔಗರ್ ಅವರನ್ನು ಮಣಿಸಿದ್ರು.








