ಗಡಿನಾಡಲ್ಲಿ ಉಸ್ತುವಾರಿ ಗಲಾಟೆ : ಆನಂದ್ ಸಿಂಗ್ ವಿರುದ್ಧ ರೆಡ್ಡಿ ಬ್ರದರ್ ಕಿಡಿ
ಬಳ್ಳಾರಿ : ಗಡಿನಾಡಲ್ಲಿ ಉಸ್ತುವಾರಿ ಗುದ್ದಾಟ ಜೋರಾಗಿ ನಡೆಯುತ್ತಿದ್ದು, ಬಳ್ಳಾರಿ ಜಿಲ್ಲೆಗೆ ಸಚಿವ ಆನಂದ್ ಸಿಂಗ್ ಉಸ್ತುವಾರಿ ಆಗಲು ನಾವು ಬಿಡಲ್ಲ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ಬೇಕಿದ್ದರೇ ನೂತನ ಜಿಲ್ಲೆ ವಿಜಯನಗರದ ಉಸ್ತುವಾರಿನ್ನ ನೋಡಿಕೊಳ್ಳಲಿ.
ಬಳ್ಳಾರಿ ಜಿಲ್ಲೆಗೆ ಅವರು ಉಸ್ತುವಾರಿ ಆಗಲು ನಾವು ಬಿಡಲ್ಲ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಎಲ್ಲ ಶಾಸಕರು ಪತ್ರ ಬರೆಯಲಿದ್ದೇವೆ ಅಂತ ತಿಳಿಸಿದ್ರು.
ಇನ್ನು ಬಳ್ಳಾರಿ ವಿಭಜನೆಯ ಆದೇಶವನ್ನು ಹಿಂಪಡೆಯುತಂತೆ ಶೀಘ್ರವೇ ಸಿಎಂ ಭೇಟಿ ಮಾಡುತ್ತೇವೆ. ಈಗಾಗಲೇ ಬಳ್ಳಾರಿ ವಿಭಜನೆ ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅವರ ಬೆಂಬಲಕ್ಕೆ ನಾವಿದ್ದೇವೆ. ಬಳ್ಳಾರಿಯಿಂದ ನೂರು ಜನರ ಸಮಿತಿಯೊಂದಿಗೆ ಸಿಎಂ ಅವರನ್ನ ಭೇಟಿಯಾಗಿ ವಿಭಜನೆಯಿಂದಾಗುವ ಅನಾನುಕೂಲಗಳನ್ನ ಮನವರಿಕೆ ಮಾಡುತ್ತೇವೆ. ಅವರು ಆದೇಶ ಹಿಂಪಡೆಯುವ ವಿಶ್ವಾಸ ವಿದೆ ಎಂದಿದ್ದಾರೆ.
ಇದೇ ವೇಳೆ ಟಿವಿ. ಬೈಕ್, ಫ್ರಿಡ್ಜ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ಮಾತನಾಡಿ, ಸಚಿವ ಉಮೇಶ್ ಕತ್ತಿ ಹೇಳಿರುವುದು ತಪ್ಪು.
ಇಂದು ಯಾರು ನಡೆದುಕೊಂಡು ಹೋಗಲ್ಲ, ಜನರ ಆರ್ಥಿಕ ಪರಿಸ್ಥಿತಿ ನೋಡಿ ಬಿಪಿಎಲ್ ಕಾರ್ಡ್ ರದ್ದುಗೊಳಿಸಬೇಕು. ಇಲ್ಲವಾದ್ರೇ ನಾವು ಹೋರಾಟಕ್ಕೆ ಸಿದ್ಧ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.