ಥಾರ್ ಮರುಭೂಮಿಯಲ್ಲಿ ಪಾಕ್ ಸಮರಾಭ್ಯಾಸ..!
ಇಸ್ಲಾಮಾಬಾದ್ : ಪಾಕಿಸ್ತಾನ ಸೇನೆಯು ಸಿಂಧ್ ಪ್ರಾಂತದ ಥಾರ್ ಮರುಭೂಮಿಯಲ್ಲಿ ಒಂದು ತಿಂಗಳ ಅವಧಿಯ ಸಮರಾಭ್ಯಾಸವನ್ನು ನಡೆಸುತ್ತಿದೆ. ಸಮರಾಭ್ಯಾಸಕ್ಕೆ ‘ಜಿದಾರುಲ್ ಹದೀದ್’ ಎಂಬ ಸಂಕೇತನಾಮವನ್ನಿಡಲಾಗಿದೆ. ಈ ಸಮರಾಭ್ಯಾಸವು ಜನವರಿ 28ರಂದು ಆರಂಭಗೊಂಡಿದ್ದು, ಪೆಬ್ರವರಿ 28ರಂದು ಮುಕ್ತಾಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಮರಾಭ್ಯಾಸದ ಭಾಗವಾಗಿ ಪಾಕ್ ಸೇನಾಪಡೆಯ ಕರಾಚಿ ಕಾರ್ಪ್ಸ್ ಪಡೆಗಳು ವ್ಯೆಹಾತ್ಮಕ ಕವಾಯತುಗಳ ತಾಲೀಮು ನಡೆಸುತ್ತಿವೆ. ಸಿಂಧ್ ನ ಚ್ಚೋರ್ನಿಂದ 74 ಕಿ.ಮೀ. ದೂರದಲ್ಲಿ ಮರುಭೂಮಿಯ ಪ್ರತಿಕೂಲ ವಾತಾರಣದಲ್ಲ್ಲಿ ಸಮರಾಭ್ಯಾಸಗಳನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗ್ತಿದೆ.
ಇರಾನ್ – ಅಫ್ಘಾನ್ ಗಡಿಯಲ್ಲಿ ತೈಲ ಟ್ಯಾಂಕರ್ ಸ್ಫೋಟ: 500 ಟ್ರಂಕ್ ಗಳು ಬೆಂಕಿಗಾಹುತಿ, 20 ಮಂದಿಗೆ ಗಾಯ..!
ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಗಡಿಯುದ್ದಕ್ಕೂ ಹರಡಿಕೊಂಡಿರುವ ಥಾರ್ ಮರುಭೂಮಿಯು ಉಭಯದೇಶಗಳಿಗೆ ಒಂದು ಪ್ರಾಕೃತಿಕವಾದ ಸೀಮಾರೇಖೆಯಾಗಿದೆ. ಇತ್ತ ಆರಬ್ಬಿ ಸಮುದ್ರದಲ್ಲಿ ಪಾಕ್ ಒಂದು ವಾರ ಅವಧಿಗೆ ಹಮ್ಮಿಕೊಂಡಿರುವ ನೌಕಾಪಡೆ ಸಮರಾಭ್ಯಾಸ ‘ಅಮಾನ್ -2021’ ಶುಕ್ರವಾರದಿಂದಲೇ ಆರಂಭವಾಗಿದ್ದು, ಚೀನಾ ಅಮೆರಿಕ, ಸೇರಿದಂತೆ 45 ದೇಶಗಳು ಪಾಲ್ಗೊಂಡಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








