ಕೃಷಿ ಇಲಾಖೆಯ ‘ಯಜಮಾನ’ ರೈತರಿಗೆ ದಾಸನಾದ ಡಿ ಬಾಸ್..!
ಚಾಲೆಂಜಿಂಗ್ ಸ್ಟಾರ್ ಈಗ ಕೃಷಿ ಇಲಾಖೆಯ ರಾಯಭಾರಿ
ಸದಾ ಕೃಷಿಕರ ಪರ ನಿಲ್ಲುವ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪರಿಸರದ ಮೇಲೆ ಇರುವ ಪ್ರೀತಿ ಒಲವು ಎಂಥಹದ್ದು ಅಂತ ನಮ್ಮೆಲ್ಲರಿಗೂ ಗೊತ್ತೇ ಇದೆ. ದರ್ಶನ್ ಅವರು ಗೋಶಾಲೆ ಫಾರ್ಮ್ ಹೌಸ್ ಸಹ ಹೊಂದಿರುವ ವಿಚಾರವೂ ತಿಳಿದೆ ಇದೆ. ಅವರು ಸ್ವತಃ ಕೃಷಿಕರೂ ಅನ್ನೋದು ಕೂಡ ಹೊಸ ವಿಚಾರವೇನಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 8 – ಸ್ಪರ್ಧಿಗಳ ಕ್ವಾರಂಟೈನ್ ಗೆ ಡೇಟ್ ಫಿಕ್ಸ್..!
ಇದೀಗ ಸ್ಯಾಂಡಲ್ ವುಡ್ ಯಜಮಾನ ಅಭಿಮಾನಿಗಳ ಡಿ – ಬಾಸ್ ದಚ್ಚು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಸರ್ಕಾರ ದರ್ಶನ್ ಅವರನ್ನ ಕೃಷಿ ಇಲಾಕೆಗೆ ರಾಯಭಾರಿಯನ್ನಾಗಿ ನೇಮಿಸಿದೆ. ಅಲ್ಲದೇ ದರ್ಶನ್ ಅವರು ಈ ಜವಾಬ್ದಾರಿ ನಿಭಾಯಿಸಲು ಒಂದೇ ಒಂದೇ ರೂಪಾಯಿಯ ಸಂಭಾವನೆಯನ್ನೂ ಪಡೆದಿಲ್ಲ. ಇದು ದರ್ಶನ್ ಅವರಿಗೆ ಕೃಷಿಕರು, ರೈತರ ಮೇಲಿರುವ ಅಭಿಮಾನ, ಕೃಷಿ ಇಲಾಖೆಯ ಮೇಲಿನ ಒಲವು ಅವರ ಸರಳತೆ, ಒಳ್ಳೆತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
‘ಆಚಾರ್ಯ’ದಲ್ಲಿ ಸಣ್ಣ ಪಾತ್ರಕ್ಕಾಗಿಯೇ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟ ‘ಬುಟ್ಟಬೊಮ್ಮ’..!
ಕೃಷಿ ಇಲಾಖೆ ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಪ್ರಸ್ತುತ ಪಡಿಸಲು, ರೈತರಿಗೆ ಈ ಯೋಜನೆಗಳ ಬಗ್ಗೆ ತಿಳಿಸಲು ಹಾಗೂ ಕೃಷಿಕರಲ್ಲಿ ಸ್ಫೂರ್ತಿ ತುಂಬಲು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ದರ್ಶನ್ ಅವರನ್ನ ನೇಮಿಸಲಾಗಿದೆ.
ಕೃಷಿಕರೂ ಆಗಿರುವ ದರ್ಶನ್ ಬಿ.ಸಿ.ಪಾಟೀಲ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದರು. ಅದರಂತೆ ಸರ್ಕಾರ ಇದೀಗ ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ದರ್ಶನ್ ಅವರನ್ನು ನೇಮಿಸಿ ಆದೇಶಿಸಿದೆ. ಇನ್ನೂ ದರ್ಶನ್ ಅವರ ಈ ನಡೆಗೆ ಮತ್ತೊಮ್ಮೆ ದಾಸನ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ದರ್ಶನ್ ಸ್ಯಾಂಡಲ್ ವುಡ್ ನ ಸ್ಟಾರ್ ನಟನಾಗಿದ್ರೂ ಸಹ ಕೃಷಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು , ಮಗನಿಗೂ ಸಹ ಕೃಷಿಯ ಬಗ್ಗೆ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ತಮ್ಮದೇ ಫಾರ್ಮ್ ಹೌಸ್ ನಲ್ಲಿ ಪ್ರಾಣಿ ಪಕ್ಷಿಗಳನ್ನ ಸಾಕುತ್ತಾ ಅವುಗಳ ಆರೈಕೆ ಮಾಡುತ್ತಾರೆ ದರ್ಶನ್. ದರ್ಶನ್ ಗೆ ಪ್ರಾಣಿ ಪಕ್ಷಿ ಗಿಡ ಮರಗಳು, ಕೃಷಿ ಬಗ್ಗೆ ಅತ್ಯಂತ ಒಲವಿದೆ. ಇತ್ತೀಚೆಗೆ ದರ್ಶನ್ ಅವರು ತಮ್ಮತೋಟದ ಮನೆಯಲ್ಲಿ ತಮ್ಮ ಪುತ್ರನಿಗೆ ಹಾಲು ಕರೆಯೋ ಪಾಠ ಮಾಡಿದ್ದ ವೀಡಿಯೋ ಸಖತ್ ವೈರಲ್ ಆಗಿತ್ತು. ದರ್ಶನ್ ಸ್ಯಾಂಡಲ್‍ವುಡ್‍ನ ಬಾಕ್ಸಾಫಿಸ್ ಸುಲ್ತಾನ. ಅವರು ಸಿಕ್ಕಾಪಟ್ಟೆ ಬ್ಯುಸಿ ಇರ್ತಾರೆ. ಅದರಲ್ಲೂ ಡಿಬಾಸ್ ಕಾಲ್‍ಶೀಟ್ ಇನೈದು ವರ್ಷ ಸಿಗೋದೆ ಕಷ್ಟ. ಹೀಗಿದ್ದು ದರ್ಶನ್ ಬಿಡುವು ಸಿಕ್ಕಾಗೆಲ್ಲಾ ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಕಾಲ ಕಳೆಯುತ್ತಾರೆ. ಅಲ್ಲಿ ತಾವು ಸಾಕಿರೋ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ. ಅಷ್ಟೇ ಅಲ್ಲದೆ ಅಲ್ಲಿರುವ ಹಸುಗಳಿಂದ ಸ್ವತಃ ತಾವೇ ಹಾಲು ಕರೆಯುತ್ತಾರೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಅನ್ನದಾತರಿಗೆ ನೆರವಾಗುವ ಹೊಸ E commerce ಬ್ಯುಸಿನೆಸ್ ಶುರು ಮಾಡಿದ್ದು, ಅದರಲ್ಲಿ ಯಶಸ್ಸು ಕೂಡ ಕಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel