ಹೊಸ ಗೆಟಪ್ ನಲ್ಲಿ ಲವ್ಲಿ ಸ್ಟಾರ್ ಪ್ರೇಮ್..! ‘ಪ್ರೇಮಂ ಪೂಜಂ’ ಟೀಸರ್…!
ಬೆಂಗಳೂರು : ಪ್ರೇಮಿಗಳ ದಿನದಂದು ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಬಹುನಿರೀಕ್ಷಿತ ‘ಪ್ರೇಮಂ ಪೂಜ್ಯ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಾಯಿದೆ. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಒಂದು ಡಿಫರೆಂಟ್ ಲುಕ್ ನಲ್ಲಿ ಸಿನಿಪ್ರೇಕ್ಷರಿಗೆ ದರ್ಶನ ನೀಡಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಪೋಸ್ಟರ್ ನಲ್ಲಿ ಪ್ರೇಮ್ ಲುಕ್ ಎಲ್ಲರನ್ನ ಅಟ್ರ್ಯಾಟ್ ಮಾಡಿತ್ತು. ಇದೀಗ ಟೀಸರ್ ನಲ್ಲಿ ಪ್ರೇಮ್ ಹೊಸ ಅವತಾರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಯಂಗ್ ಲುಕ್ ನಲ್ಲಿ ಲವರ್ ಬಾಯ್ ಗೆಟಪ್ ನಲ್ಲಿ ಲವ್ಲಿ ಸ್ಟಾರ್ ಮಿಂಚಿದ್ದಾರೆ.
‘ಶಿವ’ನ ‘ಪೊಗರ್ದಸ್ತ್ ಎಂಟ್ರಿಗೆ ‘ಖರಾಬು’ ಎಂದ ಅಭಿಮಾನಿಗಳು ..!
ಈ ಸಿನಿಮಾದಲ್ಲಿ ಪ್ರೇಮ್ ಗೆ ಜೋಡಿಯಾಗಿ ಇಬ್ಬರು ನಟಿಯರು ಕಾಣಿಸಿಕೊಂಡಿದ್ದಾರೆ. ಬೃಂದಾ ಹಾಗೂ ಐಂದ್ರಿತಾ ಈ ಸಿನಿಮಾದಲ್ಲಿ ನಾಯಕಿಯರಾಗಿದ್ದಾರೆ. ರಾಘವೇಂದ್ರ ಬಿಎಂ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ ಕೂಡ ಆಗಿದೆ. ನಿರ್ದೇಶನದ ಜೊತೆಗೆ ರಾಘವೇಂದ್ರ ಲಿರಿಕ್ಸ್ ಕೂಡ ಬರೆದಿದ್ದಾರೆ. ಕೆಂಡಬಡಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗ್ತಿರುವ ಪ್ರೇಮಂ ಪೂಜ್ಯ ಚಿತ್ರಕ್ಕೆ ರಕ್ಷಿತ್ ಕೆಡಂಬಡಿ, ಡಾ.ರಾಜ್ಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾ ಪ್ರೇಮ್ ನಟನೆ 25 ನೇ ಸಿನಿಮಾ. ಸಖಥ್ ಸ್ಟೈಲೀಶ್ ಲುಕ್ ನಲ್ಲಿ ಮಿಂಚಿರುವ ಪ್ರೇಮ್ ಈ ಸಿನಿಮಾದಲ್ಲಿ ಬರೋಬ್ಬರಿ 9 ಗೆಟಪ್ ನಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಕೃಷಿ ಇಲಾಖೆಯ ‘ಯಜಮಾನ’ ರೈತರಿಗೆ ದಾಸನಾದ ಡಿ ಬಾಸ್..!
‘ಆಚಾರ್ಯ’ದಲ್ಲಿ ಸಣ್ಣ ಪಾತ್ರಕ್ಕಾಗಿಯೇ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟ ‘ಬುಟ್ಟಬೊಮ್ಮ’..!
ಬಿಗ್ ಬಾಸ್ ಕನ್ನಡ ಸೀಸನ್ 8 – ಸ್ಪರ್ಧಿಗಳ ಕ್ವಾರಂಟೈನ್ ಗೆ ಡೇಟ್ ಫಿಕ್ಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel