ADVERTISEMENT
Thursday, August 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭಾರತೀಯ ಕ್ರಿಕೆಟ್ ನ ಆಧುನಿಕ ಏಕಲವ್ಯ ಖ್ರಿವಿಟ್ಸೊ ಕೆನ್ಸೆ..!

admin by admin
February 16, 2021
in Newsbeat, Sports, ಕ್ರೀಡೆ
Khrievitso Kense ipl Nagaland saakshatv
Share on FacebookShare on TwitterShare on WhatsappShare on Telegram

ಭಾರತೀಯ ಕ್ರಿಕೆಟ್ ನ ಆಧುನಿಕ ಏಕಲವ್ಯ ಖ್ರಿವಿಟ್ಸೊ ಕೆನ್ಸೆ..!

Khrievitso Kense  ipl Nagaland saakshatvಖ್ರಿವಿಟ್ಸೊ ಕೆನ್ಸೆ… ಈ ಹೆಸರು ಸ್ವಲ್ಪ ವಿಚಿತ್ರ.. ಹಾಗಂತ ಈ ಹೆಸರೇನು ವಿದೇಶಿಯವನದಲ್ಲ. ಭಾರತದ ನಾಗಾಲ್ಯಾಂಡ್‍ನ 16ರ ಹರೆಯದ ಹುಡುಗನದ್ದು.
ಅಷ್ಟಕ್ಕೂ ಈ ಹುಡುಗನ ಸುದ್ದಿ ಯಾಕೆ ಅಂತಿರಾ… ವಿಷ್ಯ ಇರೋದೇ ಇಲ್ಲಿ. ಈ ಹುಡುಗ ಆಧುನಿಕ ಏಕಲವ್ಯ. ಗುರುವಿನ ಮಾರ್ಗದರ್ಶನವಿಲ್ಲ. ಮಹಾಭಾರತದ ಏಕಲವ್ಯನಂತೆ ದ್ರೋಣಾಚಾರ್ಯರ ಪ್ರತಿಮೆ ಇಟ್ಟುಕೊಂಡು ಕಲಿತವನಲ್ಲ. ಬದಲಾಗಿ ಟಿವವಿ ಪರದೆಯ ಮೇಲೆ ನೋಡಿಕೊಂಡು ಕಲಿತನವನ ಯಶೋಗಾಥೆ ಇದು.
ಹೌದು, ಖ್ರಿವಿಟ್ರೋ ಕೆನ್ಸೆ.. ಯುವ ಕ್ರಿಕೆಟಿಗ. 16ರ ಹರೆಯದ ನಾಗಾಲ್ಯಾಂಡ್‍ನ ದಿಮಾಪುರದ ಹುಡುಗ. ಟಿವಿ ಪರದೆಯ ಮೇಲೆ ಶೇನ್ ವಾರ್ನ್ ಅವರ ಬೌಲಿಂಗ್ ಶೈಲಿಯನ್ನು ನೋಡಿಕೊಂಡು ಕಲಿತ ಹುಡುಗ ಈಗ ಐಪಿಎಲ್ ಅಂಗಣಕ್ಕೆ ಕಾಲಿಡಲು ಸನ್ನದ್ದನಾಗುತ್ತಿದ್ದಾನೆ.
ದಿಮಾಪುರದ ಕಾರ್ಪೆಂಟರ್ ಮಗನಾಗಿರುವ ಖ್ರಿವಿಟ್ರೋ ಕೆನ್ಸೆ ಎಂಟು ಮಕ್ಕಳ ಪೈಕಿ ಐದನೇಯವ.
ಬಾಲ್ಯದಲ್ಲೇ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ. ಆದ್ರೆ ಕ್ರಿಕೆಟ್ ಕಲಿಯಲು ಅಕಾಡೆಮಿಗೆ ಹೋಗಲು ಮನೆಯಲ್ಲಿ ಆರ್ಥಿಕ ಸಮಸ್ಯೆ. ಆದ್ರೂ ಮನೆಯಲ್ಲೇ ಶೇನ್ ವಾರ್ನ್ ಅವರ ಎಸೆತಗಳನ್ನು ನೋಡಿಕೊಂಡು ಅವರಂತೆ ಬೌಲಿಂಗ್ ಮಾಡುವುದನ್ನು ಕಲಿಯಲು ಯಾವುದೇ ರೀತಿಯಲ್ಲೂ ಬಡತನ ಅಡ್ಡಿಯಾಗಲಿಲ್ಲ.
ಆರಂಭದಲ್ಲೇ ಖ್ರಿವಿಟ್ರೋ ಕೆನ್ಸೆ ಅವರು ಆಫ್ ಸ್ಪಿನ್ನರ್ ಅಗಿದ್ದರು. ಆದ್ರೆ ಕೈ ಬೆರಳು ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಬೌಲಿಂಗ್ ಶೈಲಿಯನ್ನೇ ಬದಲಾವಣೆ ಮಾಡಿಕೊಂಡ ಕೆನ್ಸೆ. ಆಫ್ ಸ್ಪಿನ್ ಬದಲು ಲೆಗ್ ಸ್ಪಿನ್ನರ್ ಆಗಿ ಮಾರ್ಪಡು ಮಾಡಿಕೊಂಡ ಖ್ರಿವಿಟ್ಸೊ ನಂತರ ಹಿಂತಿರುಗಿ ನೋಡಲೇ ಇಲ್ಲ.
ಶೇನ್ ವಾರ್ನ್ ಬೌಲಿಂಗ್ ಶೈಲಿ ನನಗೆ ತುಂಬಾ ಇಷ್ಟ. ಅವರಂತೆ ತಾನೂ ಸ್ಪಿನ್ನರ್ ಆಗಬೇಕು ಅಂತ ಕನಸು ಕಾಣುತ್ತಿದೆ. ಆದ್ರೆ ನನಗೆ ಗುರು ಇಲ್ಲ. ನಾನೇ ಕಲಿತುಕೊಂಡೆ. ನಂತರದ ದಿನಗಳಲ್ಲಿ ನನಗೆ ಒಬ್ಬರು ಸಿಕ್ಕರು. ಅವರ ಸಹಾಯ, ಮಾರ್ಗದರ್ಶನದಿಂದ ಇವತ್ತು ಈ ಮಟ್ಟಕ್ಕೆ ಬರಲು ಕಾರಣವಾಯ್ತು ಅಂತ ಖ್ರಿವಿಟ್ಸೊ ಹೇಳುತ್ತಾನೆ.
ಸ್ಥಳೀಯ ಕೋಚ್ ಒಬ್ಬರ ಸಹಾಯದಿಂದ ನಾಗಾಲ್ಯಾಂಡ್ ನ 16 ವಯೊಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿತ್ತು. 2018-19ರ ವಿಜಯ ಮರ್ಚೆಂಟ್ Khrievitso Kense  ipl Nagaland saakshatv shene warneಟೂರ್ನಿಯಲ್ಲಿ ಉತ್ತರ ಪ್ರದೇಶದ ವಿರುದ್ಧ ಮೊದಲ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ ನಾನು ಐದು ವಿಕೆಟ್ ಪಡೆದುಕೊಂಡೆ ಅಂತ ಹೇಳಿಕೊಳ್ಳುತ್ತಾನೆ ಕೆನ್ಸೆ.
ಕಳೆದ ವರ್ಷ ನಾಗಲ್ಯಾಂಡ್ ನ ಹಿರಿಯರ ತಂಡದ ನಾಯಕ ರೊಂಗ್ಸೆನ್ ಜೋನಾಥನ್ ಮತ್ತು ಉಪನಾಯಕ ಹೊಕೇಟೊ ಝೊಮೊಮಿ ಅವರು ಕೆನ್ಸೆ ಗೆ ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿದ್ರು. ಅಲ್ಲಿ ಕೋಚ್ ಕಾನ್ವಾಲ್ಜಿತ್ ಸಿಂಗ್ ಅವರ ಗಮನ ಸೆಳೆದ ಕೆನ್ಸೆ ಗೆ ಮತ್ತೊಂದು ವೇದಿಕೆ ಸಿಕ್ಕಿತ್ತು.
ಕೆನ್ಸೆ ಯ ಪ್ರತಿಭೆಯನ್ನು ಗುರುತಿಸಿದ್ದ ಕೋಚ್ ಕಾನ್ವಾಲ್ಜಿತ್ ಸಿಂಗ್‍ಗೆ ಆತನ ಹೆಸರನ್ನು ಕರೆಯುವುದೇ ದೊಡ್ಡ ಸಮಸ್ಯೆಯಾಗಿತ್ತು. ಹೇಗೆ ಕರೆಯಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಕೋಚ್ ಕ್ರೀವ್ ಅಂತ ಕರೆಯುತ್ತಿದ್ದರು.
ಬಳಿಕ ನಾಗಲ್ಯಾಂಡ್ ಹಿರಿಯರ ತಂಡದಲ್ಲಿ ಕಾಣಿಸಿಕೊಂಡಡ ಖ್ರಿವಿಟ್ಸೊ, ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದ. ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಏಳು ವಿಕೆಟ್ ಉರುಳಿಸಿದ್ದ ಖ್ರಿವಿಟ್ಸೊ ಮಿಜೋರಾಂ ವಿರುದ್ಧ 16ಕ್ಕೆ ಮೂರು ವಿಕೆಟ್ ಕಬಳಿಸಿದ್ದ.
ಗೂಗ್ಲಿ ಎಸೆತಗಳನ್ನು ಎಸೆಯುವ ಖ್ರಿವಿಟ್ಸೊ ಗೆ ಅಫಘಾನಿಸ್ತಾನದ ರಶೀದ್ ಖಾನ್ ಅವರೇ ಹೀರೋ. ಹೀಗಾಗಿಯೇ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ದೊಡ್ಡ ಅಭಿಮಾನಿಯಾಗಿದ್ದಾನೆ ಖ್ರಿವಿಟ್ಸೊ.

Related posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

August 5, 2026
‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

August 5, 2026

Khrievitso Kense  ipl Nagaland saakshatvಸದ್ಯ ಖ್ರಿವಿಟ್ಸೊ ಕೆನ್ಸೆ ಚೆನ್ನೈ ನಲ್ಲಿ ಕ್ವಾರೈಂಟನ್ ನಲ್ಲಿದ್ದಾನೆ. ಫೆಬ್ರವರಿ 18ರಿಂದ ನಡೆಯಲಿರುವ ವಿಜಯ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ರೆಡಿಯಾಗಿದ್ದಾನೆ.
ಈಗಾಗಲೇ ಖ್ರಿವಿಟ್ಸೊ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡದ ಕಣ್ಣಿಗೆ ಬಿದ್ದಿದ್ದಾನೆ. ಹಾಗೇ ಐಪಿಎಲ್ ಬಿಡ್ಡಿಂಗ್ ಲಿಸ್ಟ್ ನಲ್ಲೂ ಇದ್ದಾನೆ. 20 ಲಕ್ಷ ಮೂಲ ಬೆಲೆಯಾಗಿದೆ. ಯಾವ ತಂಡ ಖರೀದಿ ಮಾಡುತ್ತಾರೋ ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಪ್ರತಿಭೆಗೆ ಯಾವ ಹಂಗು ಇಲ್ಲ. ಅವಕಾಶ ಸಿಗಬೇಕು ಅಷ್ಟೇ.. ಹಾಗೇ ಗುರುವಿನ ಆಶ್ರಯವಿಲ್ಲದೆ ಲೆಗ್ ಸ್ಪಿನ್ನರ್ ಆಗಿ ರೂಪುಗೊಂಡಿರುವ ಖ್ರಿವಿಟ್ಸೊ ಭವಿಷ್ಯದಲ್ಲಿ ಟೀಮ್ ಇಂಡಿಯಾ ಆಟಗಾರನಾಗಬಹುದೇನೋ.. ಯಾರಿಗೆ ಗೊತ್ತು..? ಯಾವುದಕ್ಕೂ ಕಾಲವೇ ನಿರ್ಧರಿಸಲಿದೆ.

Tags: #saakshatvDimapurIPLipl 2021ipl biddingKhrievitso KenseNagalandNagaland cricketteam india
ShareTweetSendShare
Join us on:

Related Posts

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ

by Shwetha
August 5, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿರುವುದು...

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

‘ಮೋದಿ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’: ನೆತನ್ಯಾಹು

by Shwetha
August 5, 2026
0

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತ-ಇಸ್ರೇಲ್ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಎಂದು ಹೇಳಿದ್ದಾರೆ....

ಕಾವೇರಿ ವಿವಾದ: ರಾಜ್ಯಕ್ಕೆ ಅನ್ಯಾಯವಾಗಲು ಬಿಡಲ್ಲ – ಸಿಎಂ ಡಿಕೆಶಿ

ರಾಜೀನಾಮೆ ನೀಡುವ ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

by Shwetha
August 5, 2026
0

ನೂತನ ಸಚಿವ ಸಂಪುಟ ರಚನೆಯ ಬಳಿಕ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಹಿರಿಯ ಶಾಸಕರ ಅಸಮಾಧಾನದ ನಡುವೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ....

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

ಅಧಿಕಾರ ಸಿಕ್ಕಾಗ ಮಾತ್ರ ಪಕ್ಷ ಬೇಕೆನ್ನುವುದು ಸರಿಯಲ್ಲ: ಅತೃಪ್ತ ಶಾಸಕರಿಗೆ ಸಿದ್ಧಾಂತದ ಪಾಠ ಮಾಡಿದ ಎಚ್ ಸಿ ಮಹದೇವಪ್ಪ

by Shwetha
August 5, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ನಾಯಕರಿಗೆ ಹಿರಿಯ ಮುಖಂಡ, ಮಾಜಿ ಸಚಿವ...

ದೇಶದ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ: 1413 ಕೋಟಿ ಒಡೆಯ ಡಿ ಕೆ ಶಿವಕುಮಾರ್ ನಂಬರ್ 1, ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲಾ ಅತೀ ಬಡ ಸಿಎಂ

ಶಿಸ್ತು ಮೀರಿದರೆ ಮುಂದಿನ ಚುನಾವಣೆಗೆ ಟಿಕೆಟ್ ಕಟ್- ಬಂಡಾಯ ಎದ್ದರೆ 2 ನಿಮಿಷದಲ್ಲಿ ರಾಜೀನಾಮೆ ಓಕೆ: ಬ್ಲಾಕ್‌ಮೇಲ್ ತಂತ್ರಕ್ಕೆ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

by Shwetha
August 5, 2026
0

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಎದ್ದಿರುವ ಅಸಮಾಧಾನದ ಕಿಚ್ಚನ್ನು ಆರಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಸಂಪುಟದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram