ಟೋಲ್ ಗಳಲ್ಲಿ ಚಾಲಕರು – ಟೋಲ್ ಸಿಬ್ಬಂದಿ ನಡುವೆ ವಾಗ್ವಾದ..!
ಬೆಂಗಳೂರು : ಇಂದಿನಿಂದ ಟೋಲ್ ಗಳಲ್ಲಿ ಪಾಸ್ಟ್ಯಾಗ್ ಕಡ್ಡಾಯವಾದ ಹಿನ್ನೆಲೆ ಏರ್ಪೋಟ್ ಟೋಲ್ ನ ಕ್ಯಾಶ್ ಲೈನ್ ನಲ್ಲಿ ಫಾಸ್ಟ್ ಟ್ಯಾಗ್ ಇಲ್ಲದವರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗ್ತಿದೆ. ಪಾಸ್ಟ್ಯಾಗ್ ಇಲ್ಲದ ವಾಹನಗಳಿಂದ ಎರಡು ಪಟ್ಟು ಹಣ ವಸೂಲಿ ಮಾಡಲಾಗ್ತಿದೆ. ಅಂದ್ರೆ ಇಷ್ಟು ದಿನ 95 ರೂಪಾಯಿ ಇದ್ದ ಟೋಲ್ಗೆ ಈಗ 190 ರೂಪಾಯಿಗಳನ್ನ ವಸೂಲಿ ಮಾಡಲಾಗ್ತಿದೆ. ಇನ್ನೂ ಈ ಹಿನ್ನೆಲೆ ಕೆಲವರು ದುಪ್ಪಟ್ಟು ಹಣ ನೀಡದೆ ಟೋಲ್ ನಿಂದ ವಾಪಸ್ ಆಗಿದ್ದಾರೆ.
ಪಶುಸಂಗೋಪನೆ ಇಲಾಖೆ ನನ್ನ ಕುಟುಂಬ, ಸಮಸ್ಯೆಗಳನ್ನು ಆಲಿಸಲು ಸದಾ ಸಿದ್ಧ : ಸಚಿವ ಪ್ರಭು ಚವ್ಹಾಣ್
ಅಲ್ದೇ ಟೋಲ್ ಹಣ ದುಪ್ಪಟ್ಟು ಕಟ್ಟಲು ನಿರಾಕರಿಸುತ್ತಿರುವ ಚಾಲಕರು ಹಾಗೂ ಟೋಲ್ ಸಿಬ್ಬಮದಿಗಳ ನಡುವೆ ವಾಗ್ವಾದವೂ ಆಗಿದೆ. ಸರ್ಕಾರದ ನೀತಿ ವಿರುದ್ಧ ಚಾಲಕರು ಆಕ್ರೋಶ ಹೊರಹಾಕ್ತಿದ್ದಾರೆ. ಇತ್ತ ನವಯುಗ ಟೋಲ್ ನಲ್ಲಿಯೂ ಟೋಲ್ ಸಿಬ್ಬಂದಿ ಚಾಲಕರ ನಡುವೆ ವಾಗ್ವಾದವಾದ ಪ್ರಸಂಗ ನಡೆದಿದೆ. ಟೋಲ್ ಗೇಟ್ ಅನ್ನು ತಳ್ಳಿ ವೃದ್ಧರೊಬ್ಬರ ಆಕ್ರೋಶ ವ್ಯಕ್ತಪಡಿಸಿದ್ದಾರೆ.








