#GOBackModi ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ‘ಕಿರಾತಕ ಬೆಡಗಿ’ ಓವಿಯ್ಯಾ!
ಚೆನ್ನೈ: ಭಾರತದ ವಿರುದ್ಧ ರೈತರ ಪ್ರಚೋದನೆಗಾಗಿ ವಿದೇಶದದ ಯುವತಿ ಗ್ರೇಟಾ ಶೇರ್ ಮಾಡಿಕೊಂಡಿದ್ದ ಟೂಲ್ ಕಿಟ್ ನ ಷಡ್ಯಂತ್ರ ಹಗರಣ ಬಯಲಾಗುತ್ತಿದ್ದಂತೆಯೇ, ಇತ್ತ ಟ್ವಿಟ್ಟರ್ , ಸಮಾಜಿಕ ಜಾಲತಾಣಗಳಲ್ಲಿ #ಮೋದಿಗೋಬ್ಯಾಕ್ ಟ್ರೆಂಡ್ ಮತ್ತೆ ಶುರುವಾಗಿದೆ.
ದಿಶಾ ರವಿ ಬಂಧನಕ್ಕೆ ಪಾಕ್ ಆಕ್ರೋಶ – ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ : ಇಮ್ರಾನ್..!
#ಮೋದಿಗೋಬ್ಯಾಕ್ ಎಂದು ಹಲವರು ಟ್ವೀಟ್ ಟ್ರೆಂಡ್ ಶುರು ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಹ್ಯಾಷ್ಟ್ಯಾಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಟಿ ಓವಿಯ್ಯಾ ಇದೇ ಹ್ಯಾಷ್ಟ್ಯಾಗ್ ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಬಾಲಿವುಡ್ ನ ಯುವ ನಟ ಆತ್ಮಹತ್ಯೆಗೆ ಶರಣು..!
ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ‘ಕಿರಾತಕ’ ಬೆಡಗಿ ಇದೀಗ #GOBackModi ಎಂದು ಟ್ವೀಟ್ ಮಾಡೋ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಟ್ವೀಟ್ ಮಾಡಿದ್ದು ಮೋದಿ ಅಭಿಮಾನಿಗಳನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಅಲ್ಲದೇ ಈ ಟ್ವೀಟ್ ಪ್ರಚೋದನಕಾರಿಯಾಗಿದ್ದು, ಇದರಿಂದ ಸಾರ್ವಜನಿಕವಾಗಿ ಕಲಹ ಉಂಟಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಕ್ಷಮೆ ಕೇಳುವಂತೆ ಚೆನ್ನೈ ಬಿಜೆಪಿ ಘಟಕ ಒತ್ತಾಯಿಸಿದೆ.
ಯುಪಿಯಲ್ಲಿ ಮರ್ಯಾದಾ ಹತ್ಯೆ : ಮುಸ್ಲಿಂ ಯುವಕನ ಪ್ರೀತಿಸಿದಕ್ಕೆ ಮಗಳನ್ನೇ ಕೊಂದ ಕುಟುಂಬ..!
ಈ ಸಂಬಂಧ ತಮಿಳುನಾಡಿನ ಬಿಜೆಪಿ ಕಾನೂನು ವಿಭಾಗದ ಸದಸ್ಯ ಅಲೆಕ್ಸೆಸ್ ಸುಧಾಕರ್ ಓವಿಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಎಸ್ಪಿ, ಸಿಬಿ-ಸಿಐಡಿಗೆ ದೂರು ನೀಡಿದ್ದು, ಸಾರ್ವಜನಿಕವಾಗಿ ಅಗೌರವ ತೋರಿದ್ದಕ್ಕಾಗಿ ಓವಿಯಾ ವಿರುದ್ಧ ಕ್ರಮ ಕೈಗೊಳುವಂತೆ ಒತ್ತಾಯಿಸಿದ್ದಾರೆ.








