ತನ್ನ ಅಕ್ರಮ ಸಂಬಂಧ ತಿಳಿದ ಪತ್ನಿ ಕೊಲೆಗೆ ಸುಪಾರಿ ಕೊಟ್ಟ ನೀಚ..!
ಒಡಿಶಾ: ಪತ್ನಿಗೆ ತನ್ನ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿದೆ ಎಂದು ತಿಳಿದ ತಕ್ಷಣವೇ ಈತ ಎಂತಹ ಹೇಯ ಕೃತ್ಯವೆಸಗಿದ್ದಾನೆ ಗೊತ್ತಾ..? 37 ವರ್ಷದ ವ್ಯಕ್ತಿಯೊಬ್ಬ ತನ್ನ ವಿವಾಹೇತರ ಸಂಬಂಧದ ಬಗ್ಗೆ ತಿಳಿದುಕೊಂಡ ಪತ್ನಿಯನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಒಡಿಶಾದ ನಾಯಗರ್ ಜಿಲ್ಲೆಯಲ್ಲಿ ನಡೆದಿದೆ.
ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ನಕಲಿ ನರ್ಸ್ ಮಾಡಿದ್ದೇನ್ ನೋಡಿ..!
ಈತನಿಗೆ ಮದುವೆಯಾಗಿದ್ದರೂ ಕೂಡ ಬೇರೆ ಮಹಿಳೆಯ ಜೊತೆ ಸಂಬಂಧವಿಟ್ಟುಕೊಂಡಿದ್ದ. ಈ ವಿಚಾರ ಹೇಗೋ ಪತ್ನಿಗೆ ತಿಳಿದಿತ್ತು. ಹೀಗಾಗಿ ಆಕೆಯ ಕೊಲೆಗೆ 1ಲಕ್ಷರೂಪಾಯಿ ಸುಪಾರಿ ಕೊಟ್ಟಿದ್ದ. ಅದರಂತೆ ಕೊಲೆಗಾರರು ಆಕೆ ಮನೆಯಲ್ಲಿ ಒಬ್ಬಂಟಿಯಾಗಿರುವ ವೇಳೆ ಮನೆಗೆ ನುಗ್ಗಿ ಕತ್ತು ಹಿಸುಕಿ ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ್ದಾರೆ.
VIDEO : ಮಹಿಳೆಗೆ ಇದೆಂಥಾ ಶಿಕ್ಷೆ : ಮೈದುನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳೆ..!
ಆದ್ರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಬಳಿಕ ತನಿಖೆ ನಡೆಸಿದ್ದರು. ತನಿಖೆಯ ವೇಳೆ ಆರೋಪಿಗಳು ಸುಳಿವು ಸಿಕ್ಕಿದ್ದು, ಅವರನ್ನ ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.