ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ : ಹೆಚ್ ಡಿಕೆ
ಬೆಂಗಳೂರು : ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ. ಯಾವುದೊ ಒಂದು ಸಮಾಜವನ್ನು ಚುನಾವಣೆಯಲ್ಲಿ ಸೆಳೆಯುವ ಪ್ರಯತ್ನವೂ ನನ್ನದಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮಮಂದಿರಕ್ಕೆ ಹಣ ಕೊಡದಿರುವ ಮನೆ ಮಾರ್ಕ್ ಯಾಕೆ ಎಂಬ ಕುಮಾರಸ್ವಾಮಿ ಹೇಳಿಕೆ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಬಿಜೆಪಿ ನಾಯಕರು ಹೆಚ್ ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ.
ಆದರೆ ಬೀದಿ ಬೀದಿಗಳಲ್ಲಿಕೆಲವು ಪೋಲಿಪುಂಡರು ಹಣ ಸಂಗ್ರಹ ಮಾಡುತ್ತಿದ್ದಾರಲ್ಲ ಅದಕ್ಕೆ ನನ್ನ ವಿರೋಧವಿದೆ.
ಸ್ಟಿಕ್ಕರ್ ಅಂಟಿಸುವ ಚಿಲ್ಲರೆ ರಾಜಕಾರಣ ನಾವು ಮಾಡಿಲ್ಲ. ಮಂತ್ರಿ ಅಶ್ವತ್ ನಾರಾಯಣ ಇಲ್ಲಿ ಮಲ್ಲೇಶ್ವರದಲ್ಲಿ ಕೊಟ್ಯಂತರ ರೂಪಾಯಿಯ ಜಾಗ ಹೊಡೆದುಕೊಂಡು ಬಂದರಲ್ಲ ಹಾಗಲ್ಲ ದೇವೇಗೌಡರ ಕುಟುಂಬದವರು.
ದ್ಯಾಬಲಾಪುರ ಘಟನೆಗೆ ದೇವೇಗೌಡರ ಕುಟುಂಬ ಕಾರಣರಲ್ಲ. ನಾವು ಬೆಂಕಿಹಚ್ಚುವವರಲ್ಲ. ಬೆಂಕಿ ಆರಿಸುವ ಕುಟುಂಬದವರು ದ್ಯಾಬಲಾಪುರ ಘಟನೆ ಸಂತ್ರಸ್ತರಿಗೆ ಪರಿಹಾರ ಕೊಟ್ಟವರು ನಾವು.
ಹಿಟ್ಲರನ ನಾಜಿ ಸಿದ್ದಾಂತದ ಬಗ್ಗೆ ನಾನು ಓದಿಕೊಂಡೇ ಮಾತನಾಡಿರೋದು.ಈಗ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಏನು ಎಂದು ಹೇಳಿ ನೋಡೋಣ ಎಂದು ಪ್ರಶ್ನಿಸಿದರು.
ಮೂರು ದಿನದ ಹಿಂದೆ ಮೂವರು ನನ್ನ ಮನೆಗೆ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೇಳಲು ಬಂದಿದ್ದರು.ಯಾರು ಅವರು ಎಂದು ನನಗೆ ಗೊತ್ತಿಲ್ಲ. ಆದರೆ ಇದು ದೇಶದ ಪ್ರತೀಕ ದುಡ್ಡುಕೊಡಿ ಎಂದು ನನಗೆ ಬೆದರಿಕೆ ಹಾಕುತ್ತಾರೆ.
ನನ್ನ ಹೇಳಿಕೆ ಬಾಲಿಷವೂ ಅಲ್ಲ,ಪ್ರಚಾರ ಪಡೆಯಲೂ ಅಲ್ಲ.ಯಾವುದೊ ಒಂದು ಸಮಾಜವನ್ನು ಚುನಾವಣೆಯಲ್ಲಿ ಸೆಳೆಯುವ ಪ್ರಯತ್ನವೂ ನನ್ನದಲ್ಲ. ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ ಎಂದು ಸ್ಪಷ್ಟನೆ ನೀಡಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564









