ಅಂಚೆ ಕಚೇರಿಯಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ ಮಾಡಬಹುದು..! ಹೇಗೆ ನೋಡಿ..!
ವಿಧ್ಯುತ್ ಗ್ರಾಹಕರಿಗೆ ಸಹಾಯಕವಾಗಿ ಪ್ರಯೋಜನಕಾರಿಯಾಗಿರುವ ಕ್ರಮವನ್ನ ಸರ್ಕಾರ ಕೈಗೊಂಡಿದೆ. ಇನ್ನು ಮುಂದೆ ಯಾವುದೇ ಅಂಚೆ ಕಚೇರಿಯಲ್ಲಿ ನೀವು ವಿದ್ಯುತ್ ಬಿಲ್ ಪಾವತಿ ಮಾಡಲು ಅವಕಾಶ ಇದೆ. ಹೌದು, ರಾಜ್ಯದ 5 ವಿದ್ಯುತ್ ನಿಗಮಗಳಲ್ಲಿರುವ ಗ್ರಾಹಕರು ವಿದ್ಯುತ್ ಬಿಲ್ಗಳನ್ನು ಇನ್ನು ಮುಂದೆ ಅಂಚೆ ಇಲಾಖೆಯಲ್ಲಿ ಕಟ್ಟುವ ಅವಕಾಶ ಸಿಗಲಿದೆ.
ರಾಯಲ್ ಎನ್ ಫೀಲ್ಡ್ ಮೀಟಿಯೋರ್ 350 ಬೈಕ್ ಲಾಂಚ್ : ಫೀಚರ್ಸ್ ..!
ಈ ಹಿಂದೆ ಆಫ್ಲೈನ್ ಮೂಲಕ ಮಾತ್ರ ಕಟ್ಟುವ ವ್ಯವಸ್ಥೆ ಇತ್ತು. ಇನ್ನು ಮುಂದೆ ಆನ್ಲೈನ್ನಲ್ಲಿ ಕಟ್ಟಬಹುದು ಎಂದು ಅಂಚೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆನ್ ಲೈನ್ ಸೇವೆಯನ್ನು ಶೀಘ್ರದಲ್ಲೇ ಎಲ್ಲ ಶಾಖಾ ಅಂಚೆ ಕಚೇರಿಗಳಲ್ಲೂ ಪ್ರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಮೊದಲಿನ ನಿಯಮದಂತೆ ಒಂದು ಊರಿನ ಮೆಸ್ಕಾಂ ವಿಭಾಗಕ್ಕೆ ಸಂಬಂಧ ಪಟ್ಟ ಬಿಲ್ಗಳನ್ನು ಅದೇ ತಾಲೂಕಿನಲ್ಲಿ ಅಂಚೆ ವಿಭಾಗದ ಅಂಚೆ ಕಚೇರಿಗಳಲ್ಲಿ ಮಾತ್ರ ಪಾವತಿಸಬಹುದಾಗಿದ್ದು, ಆದರೆ ಹೊಸ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ಪಾವತಿ ಮಾಡಬಹುದು ಎಂದು ತಿಳಿಸಿದ್ದಾರೆ.







