ಟಿಕ್ ಟಿಕ್ ಕೌಂಡೌನ್ ಶುರು : ಮಾರ್ಚ್ 21ಕ್ಕೆ `ಹುಲಿಯಾ ಕಹಳೆ’
ಬೆಂಗಳೂರು : ಕುರುಬ ಮೀಸಲಾತಿ ವಿಚಾರವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯರನ್ನು ಚಕ್ರವ್ಯೂಹಕ್ಕೆ ನೂಕಲು ತಂತ್ರ ರೂಪಿಸಿದ್ದ ಎದುರಾಳಿಗಳಿಗೆ ಹುಲಿಯಾ ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಕುರುಬರಿಗೆ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಕಾಣಿಸಿಕೊಳ್ಳದಿರುವುದನ್ನೇ ಬಂಡವಾಳ ಮಾಡಿಕೊಂಡು, ರಾಜಕೀಯವಾಗಿ ಅವರನ್ನು ಮುಳುಗಿಸುವ ಸಂಚಿಗೆ ಟಗರು ಟಕ್ಕರ್ ನೀಡಿದೆ.
ಹೌದು..! ಕುರುಬ ಮೀಸಲಾತಿ ವಿಚಾರ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸರ್ಕಾರದ ಸಚಿವರೇ ಮುಂದೆ ನಿಂತುಕೊಂಡು ಈ ಹೋರಾಟದ ಬ್ಲು ಪ್ರಿಂಟ್ ರೆಡಿ ಮಾಡಿದ್ದರು. ಅದರಲ್ಲೂ ಸಚಿವ ಕೆ.ಎಸ್. ಈಶ್ವರಪ್ಪ ಈ ಹೋರಾಟದ ಸಂಪೂರ್ಣ ಜವಾಬ್ದಾರಿಯನ್ನ ವಹಿಸಿಕೊಂಡಿದ್ದರು. ಆ ಮೂಲಕ ಕುರುಬ ಸಮುದಾಯದ ದೊರೆಯಾಗಿ ಸಿದ್ದರಾಮಯ್ಯರನ್ನ ಸಂಕಷ್ಟಕ್ಕೆ ಸಿಲುಕಿಸುವ ಪ್ಲಾನ್ ನಡೆದಿತ್ತು. ಯಾರು ಅಲ್ಲ..ಇಲ್ಲ ಅಂದರೂ ಸಿದ್ದರಾಮಯ್ಯ ಕುರುಬ ಸಮುದಾಯದ ಅನಭಿಶಕ್ತ ದೊರೆ ಅಂತಾ ಎಲ್ಲರಿಗೂ ತಿಳಿದಿರುವ ವಿಚಾರವೇ. ಸಿದ್ದರಾಮಯ್ಯರನ್ನು ಕುರುಬ ಸಮುದಾಯ ಮನೆಮನದಲ್ಲಿ ತುಂಬಿಕೊಂಡಿದೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಸಿದ್ದರಾಮಯ್ಯರ ಪ್ರತಿ ಹೆಜ್ಜೆಯಲ್ಲೂ ಆ ಸಮುದಾಯ ಅವರ ಹಿಂದೆ ನಿಂತಿದೆ ಅನ್ನೋದು ಎಷ್ಟೊ ಸಂದರ್ಭಗಳಲ್ಲಿ ಸಾಬೀತಾಗಿದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಯಂತ ಬಿಂಬಿತವಾದ್ರೆ ಕಾಂಗ್ರೆಸ್ ಅನ್ನು ಕಟ್ಟಿ ಹಾಕೋದು ಸುಲಭವಲ್ಲ. ಇದನ್ನ ಮನಗಂಡ ಬಿಜೆಪಿ ಈಶ್ವರಪ್ಪ ಅವರನ್ನು ಮುಂದೆ ಬಿಟ್ಟು, ಕುರುಬ ಮೀಸಲಾತಿ ಹೋರಾಟಕ್ಕೆ ಕಿಚ್ಚು ಹೊತ್ತಿಸಿ, ಸಿದ್ದರಾಮಯ್ಯರನ್ನು ಸೈಡ್ ಲೇನ್ ಮಾಡುವ ತಂತ್ರವನ್ನ ರೂಪಿಸಿತ್ತು ಅನ್ನೋದು ರಾಜಕೀಯ ಪಂಡಿತರ ಮಾತು.
ಎದುರಾಳಿಗಳಿಗೆ ಚೆಕ್ ಮೆಟ್ : ತಂತ್ರರಾಮಯ್ಯನ ಆಟ ಶುರು
ಹೌದು…! ಇದು ತಮ್ಮನ್ನು ಸೈಡ್ ಲೈನ್ ಮಾಡುವ ಅಥವಾ ಕುರುಬ ಸಮುದಾಯದಲ್ಲಿ ತಮ್ಮ ಹಿಡಿತವನ್ನ ಕಡಿಮೆ ಮಾಡುವ ತಂತ್ರ ಅಂತಾ ತುಸು ಬೇಗನೇ ಅರಿತಿರುವ ಸಿದ್ದರಾಮಯ್ಯ, ತಮ್ಮ ಎದುರಾಳಿಗಳಿಗೆ ಚೆನ್ ಮೆಟ್ ಇಟ್ಟಿದ್ದಾರೆ. ಮಾರ್ಚ್ 21 ರಂದು ಕಲಬುರಗಿಯಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಇದನ್ನೂ ಓದಿ : ಐಪಿಎಲ್-14 ಹರಾಜು : ಕಣದಲ್ಲಿ 292 ಆಟಗಾರರು, ಪ್ರಾಂಚೈಸಿಗಳ ಬಳಿ ಇರೋ ಹಣ ಎಷ್ಟು.?
ರಾಜ್ಯದ ಪ್ರಮುಖ ನಾಲ್ಕು ವಿಭಾಗಗಳಲ್ಲಿ ಹಂತಹಂತವಾಗಿ ಸಮಾವೇಶ ನಡೆಸಲು ತೀರ್ಮಾನಿಸಿರುವ ಸಿದ್ದರಾಮಯ್ಯ ಮೊದಲ ಸಮಾವೇಶವನ್ನು ಕಲಬುರಗಿಯಲ್ಲಿ ಹಾಗೂ ನಂತರದ ಸಮಾವೇಶಗಳನ್ನು ಬೆಂಗಳೂರು ಮಂಗಳೂರು ಹಾಗೂ ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಿದ್ದಾರೆ.
ಆ ಮೂಲಕ ಕುರುಬ ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಳ್ಳದ ಸಿದ್ದರಾಮಯ್ಯರನ್ನು ಸುಲಭವಾಗಿ ಟಾರ್ಗೆಟ್ ಮಾಡಬಹುದು ಅಂತಾ ಎದುರಾಳಿಗಳು ರಚಿಸಿದ್ದ ಚಕ್ರವ್ಯೂಹವನ್ನ ಹುಲಿಯಾ ಬೇಧಿಸಲು ಮುಂದಾಗಿದ್ದಾರೆ. ಹಾಗೇ ತಮನ್ನು ಸಂಕಷ್ಟದಲ್ಲಿ ಸಿಲುಕಿಸಲು ಮುಂದಾಗಿದ್ದವರಿಗೆ ಚೆಕ್ ಮೆಟ್ ಇಟ್ಟಿದ್ದಾರೆ ಸಿದ್ದರಾಮಯ್ಯ.